ನೈಟ್ ಕರ್ಫ್ಯೂ ದಿನ ನಡೆದಿದ್ದ ಘಟನೆಗೆ ಸ್ಪಷ್ಟನೆ ನೀಡಿದ ನಟಿ ದಿವ್ಯಾ ಸುರೇಶ್
ಶುಕ್ರವಾರ, 31 ಡಿಸೆಂಬರ್ 2021 (10:28 IST)
ಬೆಂಗಳೂರು: ಮೊನ್ನೆ ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಪೊಲೀಸರು ಮತ್ತು ಮಾಧ್ಯಮಗಳ ಜೊತೆ ನಡೆದ ವಾಗ್ವಾದದ ಬಗ್ಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಮಾಧ್ಯಮಗಳಲ್ಲಿ ಅಂದು ನಾನು ಪಬ್ ಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಬೇಕಿದ್ದರೆ ನೀವೇ ಅಲ್ಲಿ ಹೋಗಿ ನೋಡಿ. ಅದು ಪಬ್ ಅಲ್ಲ, ಕೆಫೆ ಅಷ್ಟೇ. ಅಷ್ಟೇ ಅಲ್ಲದೆ ನಾನು ಕುಡಿದಿದ್ದೆ, ಕಿರಿಕ್ ಮಾಡಿದ್ದೆ ಎಂದೆಲ್ಲಾ ಹೇಳಿದರು. ನಾನು ಕುಡಿದಿದ್ದೆ ಎಂದು ನೀವು ನೋಡಿದ್ದೀರಾ? ನಾನು ನಿಮ್ಮ ಜೊತೆ ಏನು ಮಿಸ್ ಬಿಹೇವ್ ಮಾಡಿದ್ದೀನಿ? ಎಂದು ಪ್ರಶ್ನಿಸಿದ್ದಾರೆ.
ಆವತ್ತು 9 ಗಂಟೆಗೆ ನಾನು ಕೆಫೆಯಿಂದ ಫ್ರೆಂಡ್ ಜೊತೆ ಹೊರಬಂದಿದ್ದೆ. 9.10 ಕ್ಕೆ ಕ್ಯಾಬ್ ಬುಕ್ ಮಾಡಿದ್ದೆ. ಅದನ್ನು ಪೊಲೀಸರಿಗೆ ಪ್ರೂಫ್ ಆಗಿ ತೋರಿಸಿದೆವು. ಅವರು ಹೋಗಿ ಎಂದರು. ಆದರೆ ಅಷ್ಟರಲ್ಲಿ ಮಾಧ್ಯಮಗಳು ಅದನ್ನೇ ಕ್ಯಾಮರಾದಲ್ಲಿ ಶೂಟ್ ಮಾಡಲು ಶುರು ಮಾಡಿದರು. ಆಗ ನನ್ನ ಗೆಳೆಯ ಜವಾಬ್ಧಾರಿಯುತವಾಗಿ ದಯವಿಟ್ಟು ಕ್ಯಾಮರಾದಲ್ಲಿ ಏಕೆ ಶೂಟ್ ಮಾಡ್ತಿದ್ದೀರಾ ಅಂತ ಕೇಳಿದರು. ನಾನು ಆವತ್ತು ಅಲ್ಲಿ ವಾದ ಮಾಡುತ್ತಾ ಕೂತರೆ 10 ಗಂಟೆಯಾಗುತ್ತಿತ್ತು. ಆದರೆ ನಾನು ನನ್ನ ಕ್ಯಾಬ್ ಬಂದೊಡನೆ ಅಲ್ಲಿಂದ ತೆರಳಿದ್ದೇನೆ. ವಿನಾಕಾರಣ ವಿವಾದ ಮಾಡಲಾಗಿದೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.