ನೆಪೋಟಿಸಂ ಬಗ್ಗೆ ನಟಿ ಶ್ರುತಿ ಹಾಸನ್ ಹೇಳಿದ್ದೇನು ಗೊತ್ತಾ?

ಬುಧವಾರ, 29 ಜುಲೈ 2020 (11:20 IST)
Normal 0 false false false EN-US X-NONE X-NONE

ಚೆನ್ನೈ : ಇತ್ತೀಚೆಗೆ ಚಿತ್ರರಂಗಗಳಲ್ಲಿ  ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದೀಗ ತಮಿಳು ನಟಿ ಶ್ರುತಿ ಹಾಸನ್ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.

ನನ್ನ ಹೆಸರಿನ ಜೊತೆ ಹಾಸನ್ ಎನ್ನುವ ಸರ್ ನೇಮ್ ಇದೆ. ಹಾಗಾಗಿ ನನಗೆ ಸುಲಭವಾಗಿ ಅವಕಾಶ ಸಿಕ್ಕಿದೆ. ನನ್ನ ಹೆತ್ತವರ ಕಾರಣದಿಂದ ನನಗೆ ಅವಕಾಶಗಳು ಸಿಕ್ಕಿವೆ ಎಂದು ನಾನು ಒಪ್ಪಿಕೊಳ್ಳುತ್ತಿದ್ದೇನೆ. ನಾನು ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಚಿತ್ರರಂಗದಲ್ಲಿ ನಾನು ತುಂಬಾ ಕಷ್ಟಪಟ್ಟಿದ್ದೇನೆ. ಚಿತ್ರರಂಗ ಪ್ರವೇಶ ಮಾಡುವುದು ಸುಲಭ ಆದರೆ ಇಲ್ಲಿ ಉಳಿಯುವುದು ಕಷ್ಟ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ