ಆಸ್ಪತ್ರೆಗೆ ದಾಖಲಾದ ನಟ ಮೋಹನ್‌ಲಾಲ್ ಹೆಲ್ತ್‌ ಬುಲೆಟಿನ್‌ನಲ್ಲೇನಿದೆ ಗೊತ್ತಾ

Sampriya

ಭಾನುವಾರ, 18 ಆಗಸ್ಟ್ 2024 (16:18 IST)
Photo Courtesy X
ಕೇರಳ: ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಅವರು ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಕೊಚ್ಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಿರಿಯ ನಟ ಮೋಹನ್‌ಲಾಲ್ ಅವರು ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನಿಂದ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ.

64 ವರ್ಷದ ಮೋಹನ್‌ ಲಾಲ್ ಅವರು ಐದು ದಿನಗಳ ಕಾಲ ವಿಶ್ರಾಂತಿಯೊಂದಿಗೆ ಸಾರ್ವಜನಿಕ ಭೇಟಿಯಾಗಬಾರದೆಂದು ವೈದ್ಯರು ಸೂಚಿಸಿದ್ದಾರೆ.

ಅಕ್ಟೋಬರ್ 2 ರಂದು 'ಬರೋಜ್' ಚಿತ್ರ ಬಿಡುಗಡೆಯಾಗಲಿದೆ. ಇದು ನಟ ಮೋಹನ್‌ ಲಾಲ್ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ. ಈ ಚಲನಚಿತ್ರವನ್ನು ಆರಂಭದಲ್ಲಿ ಮಾರ್ಚ್ 28, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರದ ತಂಡವು ಪೋಸ್ಟ್-ಪ್ರೊಡಕ್ಷನ್ ವಿಳಂಬವನ್ನು ಉಲ್ಲೇಖಿಸಿ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ