ಬೆಂಗಳೂರು: 'ಬ್ಯಾಚುಲರ್ಸ್ ಪಾರ್ಟಿ' ಸಿನಿಮಾದಲ್ಲಿ ಅನುಮತಿ ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಾಪಿ ರೈಟ್ ಉಲ್ಲಂಘನೆ ಆಗಿರೋ ವಿಚಾರವನ್ನು ಉಲ್ಲೇಖಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ.
ರಕ್ಷಿತ್ ಶೆಟ್ಟಿ ಅವರ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ಎಂಆರ್‌ಟಿ ಹಕ್ಕು ಹೊಂದಿರೋ ನ್ಯಾಯ ಎಲ್ಲಿದೆ ಮತ್ತು 'ಒಮ್ಮೆ ನಿನ್ನನ್ನು' ಹಾಡು ಬಳಕೆ ಮಾಡಿದ್ದರು. ಹಾಡು ಬಳಕೆ ಮಾಡುವಂತೆ ಕೇಳಿಕೊಂಡಿದ್ದೆ, ಆದರೆ ಅವರು ಬೇಡಿಕೆ ಹೆಚ್ಚು ಮಾಡಿದ್ದರು. ನಮ್ಮ ಭಾಷೆಯ ಹಾಡುಗಳನ್ನು ನಾವು ಬಳಸಲು ಅನುಮತಿ ಕೇಳಬೇಕೆ. ಈ ಬಗ್ಗೆ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.
ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗದ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ತೆಗೆದುಹಾಕಬೇಕು ಮತ್ತು 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.