ಕಣ್ಣೂರು: ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ಜತೆಗೆ ನಟ ದರ್ಶನ್ ಅವರು ಕೇರಳದ ಪ್ರಸಿದ್ಧ ಕಣ್ಣೂರಿನ ಮಡಾಯಿಕಾವು ಶ್ರೀಭಗವತೀ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಿಕ್ಕಿರುವ ಮಾಹಿತಿ ಪ್ರಕಾರ ನಟ ದರ್ಶನ್ ಅವರು ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈಚೆಗೆ ಡೆವಿಲ್ ಶೂಟಿಂಗ್ ಶುರು ಮಾಡಿದ ದರ್ಶನ್ ಅವರು ಇಂದು ಕೇರಳದ ಫವರ್ ಫುಲ್ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಕೇರಳದ ದೇವಸ್ಥಾನ ಇದಾಗಿದೆ. ದೇವಾಲಯಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ, ನಟ ಧನ್ವಿರ್ ಜೊತೆ ದೇವಸ್ಥಾನಕ್ಕೆ ನಟ ಭೇಟಿ ನೀಡಿದ್ದಾರೆ.
ಇನ್ನೂ ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆಗೆ ಖ್ಯಾತಿಯಾಗಿದೆ.ಅನೇಕ ರಾಜಕಾರಣಿಗಳು ಈ ದೇವಸ್ಥಾನಕ್ಕೆ ಬಂದು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ.