ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ದರ್ಶನ್ ಜೈಲು ಸೇರಿದ್ಮೇಲೆ ಪತ್ನಿ ವಿಜಯಲಕ್ಷ್ಮಿ ಪತಿಯನ್ನು ಹೇಗೆ ಹೊರತರಬೇಕೆಂಬ ಚಿಂತೆಗೆ ಶರಣಾಗಿದ್ದಾರೆ. ಇನ್ನೂ ಎರಡು ಪ್ರಕರಣ ಸಂಬಂಧ ವಿಜಯಲಕ್ಷ್ಮಿ ಅವರು ಪೊಲೀಸ್‌ಗೆ ಮಾಹಿತಿ ನೀಡಬೇಕಿತ್ತು. ಆದರೆ ಯಾವುದೇ ಕರೆಗಳಿಗೂ ವಿಜಯಲಕ್ಷ್ಮಿ ಸ್ಪಂದಿಸುತ್ತಿಲ್ಲ.
ಅಶ್ಲೀಲ ಸಂದೇಶ ಹಾಗೂ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ವಿಜಯಲಕ್ಷ್ಮಿ ಅವರ ಹೇಳಿಕೆಗೆ ಇದೀಗ ಪೊಲೀಸರಿಗೆ ತುಂಬಾನೇ ಮುಖ್ಯವಾಗಿದೆ.
ಆದರೆ ಅವರು ಮಾತ್ರ ನಿರಾಸಕ್ತಿ ತೋರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಶ್ಲೀಲ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಚೆನ್ನಮ್ಮನಕೆರೆ ಪೊಲೀಸರು ಮೂರು ನೋಟಿಸ್ ನೀಡಿದ್ದರು.
ಕೊನೆಗೆ ನೀವು ಇರುವ ಕಡೆಯೇ ಬಂದು ಹೇಳಿಕೆ ದಾಖಲಿಸುತ್ತೇವೆ ಎಂದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಹೇಳಿಕೆ ದಾಖಲಿಸದೇ ಇದ್ದರೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಅವರ ಫ್ಲಾಟ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ವಿಜಯಲಕ್ಷ್ಮಿ ಫುಲ್ ಸೈಲೆಂಟ್ ಆಗಿದ್ದಾರೆ. ಸ ಕಳ್ಳತನ ನಡೆದಿದೆ ತನಿಖೆ ನಡೆಸಿ ಎಂದಷ್ಟೇ ಹೇಳಿ ವಿಜಯಲಕ್ಷ್ಮಿ ಸುಮ್ಮನಿದ್ದಾರೆ. ನನಗೆ ಕೆಲಸ ಇದ್ದು ಮೈಸೂರಿನಲ್ಲಿ ಇರುತ್ತೇನೆ. ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿ ಪೊಲೀಸರ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.