ಕನ್ನಡದಲ್ಲಿ ಹೇಳಿದ್ದರೆ ಅರ್ಥವಾಗುತ್ತಿತ್ತೇ? ಅಜಯ್ ದೇವಗನ್ ಗೆ ಸುದೀಪ್ ತಿರುಗೇಟು
ಬುಧವಾರ, 27 ಏಪ್ರಿಲ್ 2022 (18:36 IST)
ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂಬ ಚರ್ಚೆ ಇದೀಗ ಭಾರತೀಯ ಚಿತ್ರರಂಗದಲ್ಲಿ ಕೋಲಾಹಲ ಎಬ್ಬಿಸಿದ್ದು, ಅಜಯ್ ದೇವಗನ್ ಮತ್ತು ಸುದೀಪ್ ನಡುವಣ ಭಾಷಾ ವಾರ್ ಮತ್ತೊಂದು ತಿರುವು ಪಡೆದಿದೆ.
ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಯಾಕೆ ಬಿಡುಗಡೆ ಮಾಡುತ್ತೀರಿ? ಯಾಕೆ ಹಿಂದಿಗೆ ಡಬ್ಬಿಂಗ್ ಮಾಡಿ ಬಿಡುತ್ತೀರಿ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ನಟ ಅಜಯ್ ದೇವಗನ್ ಟಾಂಗ್ ಕೊಟ್ಟಿದ್ದರು.
ಇತ್ತೀಚೆಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್, ಹಿಂದಿನ ನಮ್ಮ ಭಾಷೆ. ಹಿಂದಿ ನಮ್ಮ ಮಾತೃಭಾಷೆ.
ನನ್ನ ಸಹೋದರರಾದ ಕಿಚ್ಚ ಸುದೀಪ್ ಅವರೇ ನಿಮ್ಮ ಪ್ರಕಾರ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದಿದ್ದರು. ಹಾಗಾದರೆ ನೀವು ಹಿಂದಿಯಲ್ಲಿ ಏಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಹಿಂದಿಯಲ್ಲಿ ಡಬ್ ಮಾಡಿ ಏಕೆ ಚಿತ್ರ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಭಾಷೆ, ರಾಷ್ಟ್ರಭಾಷೆ. ಹಿಂದಿನಿಂದಲೂ ಇದೆ. ಎಂದೆಂದಿಗೂ ಇರುತ್ತದೆ. ಜನಗಣಮನ ಎಂದು ಟ್ವೀಟ್ ಮಾಡಿದ್ದಾರೆ .
ಇದಕ್ಕೆ ಜಾಣತನದಿಂದ ಪ್ರತಿಕ್ರಿಯಿಸಿರುವ ಸುದೀಪ್, ಸಾರ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್‌ಗಳನ್ನು ಗಮನಿಸಿದೆ. ಓದಿ ಅರ್ಥ ಮಾಡಿಕೊಂಡೆ. ನಾವು ಹಿಂದಿಯನ್ನು ಪ್ರೀತಿ ಮತ್ತು ಗೌರವ ನೀಡುತ್ತಿರುವುದರಿಂದ ನಮಗೆ ಈ ಗೌರವ ಲಭಿಸಿದೆ. ಒಂದು ವೇಳೆ ನಾನು ಕನ್ನಡದಲ್ಲಿ ಟೈಪ್ ಮಾಡಿ ಹಾಕಿದ್ದರೆ ನಿಮಗೆ ಅರ್ಥ ಆಗುತ್ತೆ? ನಾವು ಈ ಭಾರತಕ್ಕೆ ಸೇರಿದವರು ಅಲ್ಲವೇ ಸಾರ್ ಎಂದು ತಿರುಗೇಟು ನೀಡಿದ್ದಾರೆ.