ಸುದೀಪ್, ಶಿವಣ್ಣ, ಎಲ್ರದ್ದೂ ಆಯ್ತು, ನಿಮ್ದು ಯಾವಾಗ ಯಶ್ ಅಂತಿದ್ದಾರೆ ಫ್ಯಾನ್ಸ್

ಬುಧವಾರ, 6 ಸೆಪ್ಟಂಬರ್ 2023 (09:00 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಂದು ಎಷ್ಟೋ ದಿನಗಳೇ ಆಗಿವೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆಯಾಗಿಲ್ಲ.

ಹೀಗಾಗಿ ಅಭಿಮಾನಿಗಳ ಸಹನೆಯೂ ಮೇರೆ ಮೀರಿದೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಬಳಿಕ ಗ್ಯಾಪ್ ತೆಗೆದುಕೊಂಡಿದ್ದರು. ಆದರೆ ಈಗ ಮೂರು ಸಿನಿಮಾಗಳು ಘೋಷಣೆಯಾಗಿವೆ. ಶಿವರಾಜ್ ಕುಮಾರ್ ಹೊಸ ಸಿನಿಮಾ ಬಗ್ಗೆ ಪ್ರತೀ ದಿನವೂ ಅಪ್ ಡೇಟ್ ಬರ್ತಿದೆ.

ಆದರೆ ಯಶ್ ಹೊಸ ಸಿನಿಮಾ ಬಗ್ಗೆ ಮಾತ್ರ ಯಾವುದೇ ಅಪ್ ಡೇಟ್ ಸಿಗುತ್ತಿಲ್ಲ. ಸುದೀಪ್, ಶಿವಣ್ಣನ ಸಿನಿಮಾಗಳು ಆಗಲೇ ಘೋಷಣೆಯಾಗಿವೆ. ನಿಮ್ದು ಯಾವಾಗ ಎಂದು ಸೋಷಿಯಲ್ ಮೀಡಿಯಾ ಮೂಲಕ ಯಶ್ ಗೆ ಪ್ರಶ್ನೆ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ