ರಾಕಿಂಗ್ ಸ್ಟಾರ್ ಯಶ್ ಮನೆ ಮುಂದೆ ಸಾಲುಗಟ್ಟಿ ನಿಂತ ಫ್ಯಾನ್ಸ್

ಗುರುವಾರ, 2 ಫೆಬ್ರವರಿ 2023 (17:06 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಮುಂದೆ ಇಂದು ಜನ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿತ್ತು. ಇದಕ್ಕೆ ಕಾರಣ ರಾಕಿ ಭಾಯಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದು.

ಇತ್ತೀಚೆಗೆ ಯಶ್ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗಲು ಸಾಧ‍್ಯವಾಗಿರಲಿಲ್ಲ. ಆಗ ಮುಂದೊಂದು ದಿನ ಫ್ಯಾನ್ಸ್ ಭೇಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು.

ಕೊಟ್ಟ ಮಾತಿನಂತೆ ಯಶ್ ಇಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಯಶ್ ಭೇಟಿಯಾಗಬಹುದೆಂಬ ಕಾರಣಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರು. ಜೊತೆಗೆ ತಮ್ಮ ಮೆಚ್ಚಿನ ನಟನಿಗಾಗಿ ಗ್ರೀಟಿಂಗ್ ಕಾರ್ಡ್, ಫೋಟೋ ಇತ್ಯಾದಿ ವಿಶೇಷ ಕಾಣಿಕೆಗಳನ್ನೂ ತಂದಿದ್ದರು. ಎಲ್ಲರನ್ನೂ ಭೇಟಿಯಾಗಿ ಸೆಲ್ಫೀಗೆ ಪೋಸ್ ಕೊಟ್ಟ ಯಶ್ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ