ಬಹುಭಾಷಾ ತಾರೆ ರಾಶಿ ಖನ್ನಾ ಮೂಗಿನಲ್ಲಿ ರಕ್ತ ಕಂಡು ಗಾಬರಿಯಾದ ಫ್ಯಾನ್ಸ್‌: ಶೂಟಿಂಗ್‌ ವೇಳೆ ಏನಾಯಿತು

Sampriya

ಬುಧವಾರ, 21 ಮೇ 2025 (14:49 IST)
Photo Courtesy X
ಬೆಂಗಳೂರು: ಬಹುಭಾಷಾ ತಾರೆ ರಾಶಿ ಖನ್ನಾಗೆ  ಸಿನಿಮಾವೊಂದರ ಶೂಟಿಂಗ್‌ ವೇಗೆ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಪೋಸ್ಟ್‌ ಮಾಡಿದ್ದು, ನಟಿಯ ಮೂಗಿನಲ್ಲಿ ರಕ್ತ ಕಂಡು ಅಭಿಮಾನಿಗಳು ಗಾಬರಿಯಾಗಿದ್ದಾರೆ.   

ಚಿತ್ರವೊಂದರ ಶೂಟಿಂಗ್‌ ವೇಳೆ ಸಾಹಸ ದೃಶ್ಯ ಚಿತ್ರೀಕರಿಸುವಾಗ ರಾಶಿ ಅವರಿಗೆ ಪೆಟ್ಟಾಗಿದೆ. ಸದ್ಯ ನಟಿ ಚಿಕಿತ್ಸೆಯ ನಂತರ ರಾಶಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

ಈ ಮೂಲಕ ರಾಶಿ ಖನ್ನಾ ತಮ್ಮ ಹೊಸ ಚಿತ್ರಕ್ಕಾಗಿ ತೀವ್ರವಾದ ಆಕ್ಷನ್ ಸನ್ನಿವೇಶಗಳನ್ನು ನಿರ್ವಹಿಸುವುದಾಗಿ ಬಹಿರಂಗಪಡಿಸಿದ್ದಾರೆ. ರಾಶಿ ಖನ್ನಾ 2013 ರಲ್ಲಿ 'ಮದ್ರಾಸ್ ಕೆಫೆ' ಎಂಬ ಹಿಂದಿ ಚಿತ್ರದ ಮೂಲಕ ನಟಿಯಾಗಿ ಪಾದರ್ಪಣೆ ಮಾಡಿದರು. ನಂತರ ತೆಲುಗು, ತಮಿಳು ಚಿತ್ರದಲ್ಲಿ ಬಣ್ಣ ಹೆಚ್ಚಿದ್ದಾರೆ.

ಕೆಲವು ಪಾತ್ರಗಳು ನಿಮ್ಮ ದೇಹ, ನಿಮ್ಮ ಉಸಿರು, ನಿಮ್ಮ ಗಾಯವನ್ನು ಕೇಳುತ್ತವೆ. ನೀವು ಬಿರುಗಾಳಿಯಾದಾಗ ಗುಡುಗಿಗೆ ಹೆದರುವ ಅಗತ್ಯವಿಲ್ಲ. ಶೀಘ್ರದಲ್ಲೇ ಎಂದು ರಾಶಿ ಖನ್ನಾ ಪೋಸ್ಟ್ ಮಾಡಿದ್ದಾರೆ.  

ರಕ್ತಸಿಕ್ತ ಗಾಯಗಳೊಂದಿಗೆ ರಾಶಿ ಖನ್ನಾ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ರಾಶಿ ಖನ್ನಾ ಯಾವ ಚಿತ್ರದ ಶೂಟಿಂಗ್ ಸಮಯದಲ್ಲಿ ಗಾಯಗೊಂಡರು ಎಂಬ ಮಾಹಿತಿ ಬಿಡುಗಡೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ