ಮಹೇಶ್ ಬಾಬು ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

ಗುರುವಾರ, 10 ಸೆಪ್ಟಂಬರ್ 2020 (09:53 IST)
ಹೈದರಾಬಾದ್ : ಟಾಲಿವುಡ್ ನಟ ಮಹೇಶ್ ಬಾಬು ತಮ್ಮ ಹೊಸ ಲುಕ್ ರಿವೀಲ್ ಮಾಡಿದ್ದು, ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರ ಅಕ್ಟೋಂಬರ್ ನಲ್ಲಿ ಸೆಟ್ಟೇರಲಿದೆ. ಈ ನಡುವೆ ಇದೀಗ ಮಹೇಶ್  ಬಾಬು ಸೆಲೆಟ್ರಿಟಿ ಪೋಟೀಗ್ರಾಫರ್ ಅವಿನಾಶ್ ಗೋವಾರಿಕರ್ ಅವರ ಫೋಟೋ ಶೂಟ್ ಗೆ ಫೋಸ್ ಕೊಟ್ಟಿದ್ದಾರೆ.

ಸ್ವಲ್ಪ ಗಡ್ಡ ಬಿಟ್ಟು , ಹೇರ್ ಸ್ಟೈಲ್ ಕೊಂಚ ಬದಲಾಯಿಸಿಕೊಂಡ ಮಹೇಶ್ ಬಾಬು ಲುಕ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಅವರ ಹೊಸ ಸಿನಿಮಾ  ‘ಸರ್ಕಾರು ವಾರಿ ಪಾಟ’ ಲುಕ್ ಇರಬೇಕೆಂದು ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ