ರಜನೀಕಾಂತ್ ಅಭಿಮಾನಿಗಳಿಗೆ ದೀಪಾವಳಿಯ ಉಡುಗೊರೆಯಾಗಿ ಅನ್ನಥಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗುತ್ತಾ?

ಶುಕ್ರವಾರ, 13 ನವೆಂಬರ್ 2020 (15:22 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರು ಪ್ರಸ್ತುತ ತಮಿಳು ಚಿತ್ರರಂಗದ ಖ್ಯಾತ ನಟ. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ರಜನೀಕಾಂತ್ ಅವರ ಕೊನೆಯ ಚಿತ್ರ ದರ್ಬಾರ್ ಬಹಳ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸೌಂಡ್ ಮಾಡಿತ್ತು. ಸದ್ಯ ಅವರು ಶಿವ ನಿರ್ದೇಶನದ ಅನ್ನಥಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದೀಗ ರಜನೀಕಾಂತ್ ಅಭಿಮಾನಿಗಳಿಗೆ ದೀಪಾವಳಿಯ ಉಡುಗೊರೆಯಾಗಿ ಅನ್ನಥಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ರಜನೀಕಾಂತ್ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಆದರೆ ಇನ್ನೂ ಅಧಿಕೃತ  ಮಾಹಿತಿ ಹೊರಬಿದ್ದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ