'ನನ್ನ ಮೇಲೆ ನಂಬಿಕೆಯಿಟ್ಟ ಮೊದಲ ವ್ಯಕ್ತಿ': ಒಡಹುಟ್ಟಿದವರ ದಿನಕ್ಕೆ ಸಹೋದರನ ಬಗ್ಗೆ ವರುಣ್ ಧವನ್ ಪೋಸ್ಟ್‌

Sampriya

ಬುಧವಾರ, 10 ಏಪ್ರಿಲ್ 2024 (15:40 IST)
photo Courtesy Instagram
ಮುಂಬೈ: ರಾಷ್ಟ್ರೀಯ ಒಡಹುಟ್ಟಿದವರ ದಿನವು ನಮ್ಮ ಸಹೋದರ ಸಹೋದರಿಯರೊಂದಿಗೆ ನಮ್ಮ ಸಂಪರ್ಕವನ್ನು ಗೌರವಿಸುವ ದಿನವಾಗಿದೆ. ಇಂದು ಒಡಹುಟ್ಟಿದವರ ದಿನವಾಗಿದ್ದು ಬಾಲಿವುಡ್ ಖ್ಯಾತ ನಟ ವರುಣ್ ಧವನ್ ತನ್ನ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯ ತೆಗೆದುಕೊಂಡು ತನ್ನ ಸಹೋದರ ಬಗ್ಗೆ ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ತನ್ನ ಸಹೋದರ ರೋಹಿತ್ ಜೊತೆಗಿನ ಒಂದೆರಡು ಫೋಟೋಗಳನ್ನು ಹಂಚಿಕೊಂಡು, ನೀನಿಲ್ಲದೆ ನಾನು ಇರುತ್ತಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟ ಮೊದಲ ವ್ಯಕ್ತಿ ಎಂದು ಪ್ರೀತಿಯ ಪದಗಳಿಂದ ಧನ್ಯವಾದ ತಿಳಿಸಿದ್ದಾರೆ.

"ನನ್ನ ಹಿರಿಯ ಸಹೋದರ ಇಲ್ಲದಿದ್ದರೆ ನಾನು ಜೀವನದಲ್ಲಿ ನೀನು ಇರದಿದ್ದರೆ, ನಾನೂ ಎಲ್ಲಿಯೂ ಇರುತ್ತಿರಲಿಲ್ಲ. ನನ್ನನ್ನು ನಂಬಿದ ಮೊದಲ ವ್ಯಕ್ತಿ ನನ್ನ ಸಹೋದರ. #happysiblingsday" ಎಂದು ಬರೆದಿದ್ದಾರೆ.

ವರುಣ್ ಮತ್ತು ರೋಹಿತ್ 2016 ರ 'ಡಿಶೂಮ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಜಾನ್ ಅಬ್ರಹಾಂ, ಜಾಕ್ವೆಲಿನ್ ಫರ್ನಾಂಡೀಸ್, ಅಕ್ಷಯ್ ಖನ್ನಾ ಮತ್ತು ಸಾಕಿಬ್ ಸಲೀಂ ನಟಿಸಿರುವ ಈ ಚಿತ್ರವನ್ನು ರೋಹಿತ್ ನಿರ್ದೇಶಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ