ಬಾಲಿವುಡ್ ಬೆಡಗಿಯ ಫೋಟೋ ನೋಡಿ ‘ಅಷ್ಟೆಲ್ಲಾ ಮೈಮಾಟ ತೋರಬೇಡಮ್ಮಾ’ ಎಂದರು ಅಭಿಮಾನಿಗಳು!
ಗುರುವಾರ, 16 ನವೆಂಬರ್ 2017 (08:32 IST)
ಮುಂಬೈ: ಬಾಲಿವುಡ್ ನಟಿಯರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೋ ಹಾಕಿ ಕಾಮೆಂಟಿಗರಿಗೆ ಆಹಾರವಾಗುವುದು ಹೊಸದೇನಲ್ಲ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವವರು ದಿಶಾ ಪಟಾನಿ.
ದಿಶಾ ಪಟಾನಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಮೂರು ಗ್ಲಾಮರಸ್ ಫೋಟೋ ಹಾಕಿದ್ದಳು. ಈ ಫೋಟೋಗಳನ್ನು ನೋಡಿ ಜನ ತಲೆಗೊಂದರಂತೆ ಮಾತನಾಡಿದ್ದು, ದಿಶಾಗೆ ಮುಜುಗರವಾಗುವಂತೆ ಮಾಡಿದ್ದಾರೆ.
ಇಷ್ಟೊಂದು ಎಕ್ಸ್ ಪೋಸ್ ಮಾಡಬೇಡಮ್ಮಾ ಎಂದು ಕೆಲವರು ಸಲಹೆಯನ್ನೂ ನೀಡಿದ್ದಾರೆ. ಅಂತೂ ಪ್ರಚಾರಕ್ಕೆಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಅಭಿಮಾನಿಗಳಿಂದ ಕಾಲೆಳೆಸಿಕೊಂಡಿದ್ದಾರೆ ದಿಶಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ