ಸೆನ್ಸಾರ್ ನಲ್ಲಿ ಗೀತಾ ಪಾಸ್, ನಾಳೆ ಟ್ರೈಲರ್

ಮಂಗಳವಾರ, 10 ಸೆಪ್ಟಂಬರ್ 2019 (10:28 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.


ಸೆನ್ಸಾರ್ ನಲ್ಲಿ ಪಾಸಾಗಿರುವ ಗೀತಾ ಸೆಪ್ಟೆಂಬರ್ 27 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದೆ.

ಗೀತಾ ಸಿನಿಮಾದ ಟ್ರೈಲರ್ ನಾಳೆ ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ಪ್ರೇಮ ಕತೆ ಮತ್ತು ಕನ್ನಡ ಹೋರಾಟದ ಹಿನ್ನಲೆಯಿರುವ ಸಿನಿಮಾ ಇದಾಗಿದ್ದು ವಿಜಯ್ ನಾಗೇಂದ್ರ ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ