ಅಂತೂ ಇಂತೂ ‘ಲಾಕ್ ಡೌನ್’ ಹೆಸರಿನಲ್ಲಿ ಸಿನಿಮಾ ಬಂತು!

ಗುರುವಾರ, 23 ಏಪ್ರಿಲ್ 2020 (09:43 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ದೇಶವಿಡೀ ಕಳೆದ ಒಂದು ತಿಂಗಳಿನಿಂದ ಲಾಕ್ ಡೌನ್ ನಲ್ಲಿದೆ. ಲಾಕ್ ಡೌನ್ ಪರಿಸ್ಥಿತಿ ಅನುಭವಿಸಿ ಜನರೂ ಬೇಸತ್ತಿರಬಹುದು. ಇದೀಗ ಅದೇ ಟೈಟಲ್ ಇಟ್ಟುಕೊಂಡು ಸಿನಿಮಾವೊಂದು ಬರಲಿದೆ.
 


ಸ್ಯಾಂಡಲ್ ವುಡ್ ನ ಕ್ರಿಯೇಟಿವ್ ನಿರ್ದೇಶಕರಾಗಿರುವ ಗುರುಪ್ರಸಾದ್ ‘ಲಾಕ್ ಡೌನ್’ ಹೆಸರಿನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾಗೆ ಈಗಾಗಲೇ ಸ್ಕ್ರಿಪ್ಟ್ ರೆಡಿ ಮಾಡಿದ್ದಾರಂತೆ. ಈ ಸಿನಿಮಾದಲ್ಲಿ ತಾವೇ ಅಭಿನಯಿಸಲಿದ್ದಾರೆ.

ಆಪ್ ಮೂಲಕ ಸಿನಿಮಾ ಬಿಡುಗಡೆ ಮಾಡಲು ಗುರುಪ್ರಸಾದ್ ನಿರ್ಧರಿಸಿದ್ದಾರೆ. ಇದೊಂದು ಕಾಮಿಡಿ-ಕ್ರೈಮ್ ಸಿನಿಮಾಗಿರಲಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ