ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕಳೆದ ಬಾರಿ ಸಂಸತ್ ಗೆ ನಮಸ್ಕರಿಸಿ ಸಂಸತ್ ನ್ನೇ ಬದಲಾಯಿಸಿದ, ಈ ಬಾರಿ ಪ್ರಧಾನಿಯಾದಾಗ ಸಂವಿಧಾನಕ್ಕೆ ನಮಸ್ಕರಿಸಿದ್ದ. ಅದನ್ನೇ ಬದಲಾಯಿಸ್ತಾನೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ. ಮೋದಿಯವರು ಮೊದಲು ಪ್ರಧಾನಿಯಾದಾಗ ಸಂಸತ್ ಭವನದ ಮೆಟ್ಟಿಲಿಗೆ ನಮಸ್ಕರಿಸಿದ್ದು ನೋಡಿ ಭಾವುಕನಾಗಿ ಎಂಥಾ ಸಂಸ್ಕಾರ ಎಂದುಕೊಂಡೆ. ಆದರೆ ಮರುದಿನ ನನ್ನ ರೆಕಾರ್ಡಿಂಗ್ ಸ್ಟುಡಿಯೋಗೆ ಹೋದಾಗ ಕೇರಳ ಮೂಲದ ಅಶ್ಫಕ್ ಎಂದು ಸೌಂಡ್ ಇಂಜಿನಿಯರ್ ನನಗೆ ನಿಜ ದರ್ಶನ ಮಾಡಿದ ಎಂದಿದ್ದಾರೆ.
ಕೇರಳದವರು ಎಷ್ಟು ಬುದ್ಧಿವಂತರು ನೋಡಿ. ಮರುದಿನ ಸ್ಟುಡಿಯೋಗೆ ಹೋಗಿ ಅಶ್ಫಕ್ ಗೆ ಹೇಳಿದೆ, ನೋಡು ನಿನ್ನೆ ಮೋದಿಯವರು ಸಂಸತ್ ನ ಮೆಟ್ಟಿಲಿಗೆ ನಮಸ್ಕಾರ ಮಾಡಿದ್ದು ನೋಡಿದೆಯಾ ಎಂದು ಕೇಳಿದೆ. ಆದರೆ ಅವನು ಕೈ ಮೇಲೆತ್ತಿ ಎಲ್ಲಾ ನಾಟಕ ಎಂಬಂತೆ ಸನ್ನೆ ಮಾಡಿದ. ಕೆಲವು ಸಮಯ ಕಳೆದ ಮೇಲೆ ಮೋದಿ ಆ ಸಂಸತ್ ನ್ನೇ ಬದಲಾಯಿಸಿದ.
ಈಗ ಮೊನ್ನೆ ಪ್ರಧಾನಿಯಾದಾಗ ಸಂವಿಧಾನಕ್ಕೆ ನಮಸ್ಕರಿಸಿದ್ದ. ಆಗ ಅಶ್ಫಕ್ ನನಗೆ ಕರೆ ಮಾಡಿ, ನೋಡಿ ಸರ್ ಮೋದಿ ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ ಎಂದ. ಅಂದರೆ ಈ ಬಾರಿ ಸಂವಿಧಾನವನ್ನೇ ಬದಲಾಯಿಸ್ತಾನೆ ಎಂದು ಹಂಸಲೇಖ ಲೇವಡಿ ಮಾಡಿದ್ದಾರೆ. ನಾವು ಕನ್ನಡಿಗರು ಎಲ್ಲವನ್ನೂ ಭಾವನಾತ್ಮಕವಾಗಿ ಯೋಚಿಸುತ್ತೇವೆ. ಆದರೆ ಕೇರಳದವರು ಎಷ್ಟು ಬುದ್ಧಿವಂತರು ನೋಡಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ ಆವತ್ತೇ ಅವನು ನಿಜ ಹೇಳಿದ್ದ ಎಂದಿದ್ದಾರೆ.