ಪತ್ನಿ ನೀಡಿದ ವರದಿ ಇಲ್ಲಿ ನಡೆಯಲ್ಲ, ಸರ್ಜಿಕಲ್ ಚೇರ್‌ಗೆ ಬೇಡಿಕೆಯಿಟ್ಟ ದರ್ಶನ್‌ಗೆ ಆರೋಗ್ಯ ತಪಾಸಣೆ
ಶನಿವಾರ ಪತಿಯನ್ನು ಭೇಟಿ ಮಾಡಲು ಬಂದಿದ್ದ ವಿಜಯಲಕ್ಷ್ಮೀ ಅವರು ದರ್ಶನ್ ಬೆನ್ನು ನೋವಿನ ಸಂಬಂಧ ವರದಿಯನ್ನು ನೀಡಿದ್ದಾರೆ. ಆದರೆ ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಜೈಲಿನ ವರದಿಯೇ ಮುಖ್ಯ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಅದರಂತೆ ದರ್ಶನ್‌ಗೆ ಆರೋಗ್ಯ ತಪಾಸಣೆ ಮಾಡುವಂತೆ ಹೇಳಿದ್ದಾರೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.