ಚೆನ್ನೈ: ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗೆ ಆರಂಭದ ದಿನದಲ್ಲಿ ಪ್ರೀತಿ ಮೂಡಲು ಕಾರಣ ತಮಿಳು ನಟ ಧನುಷ್. ಇದನ್ನು ಸಂದರ್ಶನವೊಂದರಲ್ಲಿ ನಯನ್ ದಂಪತಿ ರಿವೀಲ್ ಮಾಡಿದ್ದಾರೆ.
ವಿಘ್ನೇಶ್ ಶಿವನ್ ಮತ್ತು ನಯನ್ ದಂಪತಿ ಹಲವು ಸಮಯದವರೆಗೆ ಡೇಟಿಂಗ್ ಮಾಡಿ ಬಳಿಕ ಕೆಲವು ಸಮಯ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಇದಾದ ಬಳಿಕ ಇಬ್ಬರೂ ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆ ಬಳಿಕ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನೂ ಪಡೆದಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಪ್ರೇಮ ಶುರುವಾಗಿದ್ದು ಹೇಗೆ ಎಂದು ನಯನ್ ಮತ್ತು ವಿಘ್ನೇಶ್ ರಿವೀಲ್ ಮಾಡಿದ್ದಾರೆ. ನಮ್ಮಿಬ್ಬರ ನಡುವಿನ ಪ್ರೀತಿಗೆ ಪ್ರಮುಖ ಸೇತುವೆಯಾಗಿದ್ದು ನಟ ಧನುಷ್ ಎಂದು ವಿಘ್ನೇಶ್ ಹೇಳಿದ್ದಾರೆ. ನಾನುಮ್ ರೌಡಿ ದಾನ್ ಸಿನಿಮಾ ವೇಳೆ ಧನುಷ್ ರಿಂದಾಗಿ ನಾವು ಹತ್ತಿರವಾದೆವು ಎಂದಿದ್ದಾರೆ.
ನಯನತಾರಾಗೆ ಸ್ಕ್ರಿಪ್ಟ್ ವಿವರಿಸಲು ಧನುಷ್ ನಾನೇ ಹೋಗಬೇಕೆಂದು ಹೇಳಿದರು. ಅದರಂತೆ ನಯನ್ ಗೆ ಸ್ಕ್ರಿಪ್ಟ್ ಹೇಳಿದಾಗ ಆಕೆಗೆ ಇಷ್ಟವಾಗಿ ಒಪ್ಪಿಕೊಂಡಳು. ನಯನ್ ಒಪ್ಪಿಕೊಂಡ ಬಳಿಕ ವಿಜಯ್ ಸೇತುಪತಿ ಕೂಡಾ ಸಿನಿಮಾ ಮಾಡಲು ಒಪ್ಪಿಕೊಂಡರು. ಸ್ಕ್ರಿಪ್ಟ್ ಬಗ್ಗೆ ವಿವರಿಸಲು ನಾನು ನಯನ್ ಜೊತೆ ತುಂಬಾ ಸಮಯ ಕಳೆದಿದ್ದೆ. ಆಗಲೇ ನಮ್ಮ ನಡುವೆ ಆತ್ಮೀಯತೆ ಹೆಚ್ಚಾಯಿತು. ಒಂದು ವರ್ಷ ಪರಿಚಿತರಾಗಿಯೇ ಇದ್ದೆವು ಎಂದು ವಿಘ್ನೇಶ್ ಹೇಳಿದ್ದಾರೆ.
ವೆಳ್ಳಯಿಲ್ಲ ಪಟ್ಟಾತಿರಿ ಸಿನಿಮಾದಲ್ಲಿ ವಿಘ್ನೇಶ್ ಅತಿಥಿ ಪಾತ್ರವೊಂದನ್ನು ಮಾಡಿದ್ದರು. ಈ ವೇಳೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡೋಣ ಎನಿಸಿತು. ಮೂರು ತಿಂಗಳ ಬಳಿಕ ನಾವಿಬ್ಬರೂ ಜೊತೆಗಿರಲು ತೀರ್ಮಾನಿಸಿದೆವು ಎಂದು ನಯನ್ ಹೇಳಿದ್ದಾರೆ.