ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಹೇಗೆ ಗೊತ್ತಾ...?

ಭಾನುವಾರ, 14 ಜನವರಿ 2018 (09:45 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೃಜನ್ ಲೋಕೇಶ್ ಅವರ  ಒಳ್ಳೆಯ ಗೆಳೆಯರಾಗಿದ್ದು, ಈಗ ಸೃಜನ್ ಅವರ  ತಾಯಿಯ ಹುಟ್ಟುಹಬ್ಬವನ್ನು ಆಚರಿಸುವುದರ ಮೂಲಕ ಅವರ  ತಾಯಿಗೂ ದರ್ಶನ್ ಅವರು ಒಳ್ಳೆಯ ಮಗ ಎನಿಸಿಕೊಂಡಿದ್ದಾರೆ.

 
ದರ್ಶನ್ ಅವರು ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ತಮ್ಮ ಕುಟುಂಬಸ್ಥರೊಂದಿಗೆ ಆಚರಿಸಿ, ಈ ಮೂಲಕ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಸೃಜನ್ ಕುಟುಂಬದವರು ತುಂಬಾ ಭಾವುಕರಾಗಿದ್ದಾರೆ. ಈ ಬರ್ತ್ ಡೇ ಸಂಭ್ರಮದ ಫೋಟೋ ಕೂಡ ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

 
ಎಲ್ಲಾ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಗೆ ಕಾಣಿಸಿಕೊಳ್ಳುತ್ತಿದ್ದು, ತಾವೂ ಒಳ್ಳೆಯ ಸ್ನೇಹಿತರೆಂದು ಕೂಡ ಹೇಳಿದ್ದಾರೆ. ದರ್ಶನ್ ಹಾಗು ಸೃಜನ್ ಅವರು ಪೋರ್ಕಿ ಹಾಗು ನವಗ್ರಹ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ