ಪವನ್ ಕಲ್ಯಾಣ್ ಜೊತೆ ನಟಿಸಲು ಸಾಯಿ ಪಲ್ಲವಿ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

ಮಂಗಳವಾರ, 2 ಫೆಬ್ರವರಿ 2021 (10:09 IST)
ಹೈದರಾಬಾದ್ : ಪವನ್ ಕಲ್ಯಾಣ್ ಪ್ರಸ್ತುತ ‘ಅಯ್ಯಪ್ಪನಂ ಕೋಸಿಯಂ’ ಚಿತ್ರದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಾಗರ ಚಂದ್ರ ನಿರ್ದೇಶನದಲ್ಲಿ ಸೀತಾರಾ ಎಂಟರ್ ಟೈನ್ ಮೆಂಟ್ಸ್ ನಿರ್ಮಿಸುತ್ತಿದೆ.

ಈ ಚಿತ್ರದಲ್ಲಿ ರಾಣಾ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅವರಿಗೆ ಜೋಡಿಯಾಗಿ ಐಶ್ವರ್ಯ ರಾಜೇಶ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ  ಪವನ್ ಗೆ ಜೋಡಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ, ಅದಕ್ಕಾಗಿ ಸಾಯಿ ಪಲ್ಲವಿ ಅವರು 2 ಕೋಟಿ ಸಂಭಾವನೆ ಕೇಳಿದ್ದಾರಂತೆ. ಇಷ್ಟು ದೊಡ್ಡ ಮೊತ್ತ ನೀಡಲು ನಿರ್ಮಾಪಕರು ಒಪ್ಪಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ