ಒಡೆಯ ಸಿನಿಮಾ ಟ್ರೈಲರ್ ನೋಡಿದ ಜನ ಇದು ತಮಿಳು ಸಿನಿಮಾ ರಿಮೇಕ್ ಅಂದ್ರು!

ಸೋಮವಾರ, 2 ಡಿಸೆಂಬರ್ 2019 (09:20 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಟ್ರೈಲರ್ ನಿನ್ನೆ ಬಿಡುಗಡೆಯಾಗಿ ಭಾರೀ ವೀಕ್ಷಣೆ ಪಡೆದಿದೆ. ಆದರೆ ಈ ಸಿನಿಮಾ ಟ್ರೈಲರ್ ನೋಡಿದ ಜನ ಇದು ರಿಮೇಕ್ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


ಒಡೆಯ ಸಿನಿಮಾ ತಮಿಳಿನ ‘ವೀರಂ’ ಸಿನಿಮಾ ರಿಮೇಕ್ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ವೀರಂ ಸಿನಿಮಾದಲ್ಲಿ ತಲಾ ಅಜಿತ್ ನಾಯಕರಾಗಿದ್ದರು.

ಈ ಬಗ್ಗೆ ಚಿತ್ರತಂಡ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಟ್ರೈಲರ್ ನೋಡಿದ ಜನ ಈ ಸಿನಿಮಾ ವೀರಂ ರಿಮೇಕ್ ಎನ್ನುತ್ತಿದ್ದಾರೆ. ಹಾಗಿದ್ದರೂ ಮಾಸ್ ಟ್ರೈಲರ್ ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ