ಶಾಹಿದ್ ಕಪೂರ್ ಕತ್ರಿನಾ ಕೈಫ್​ಗೆ ಪ್ರಪೋಸ್​ ಮಾಡಿದ್ದು ನಿಜನಾ?

ಭಾನುವಾರ, 9 ಸೆಪ್ಟಂಬರ್ 2018 (06:32 IST)
ಮುಂಬೈ : ಇತ್ತೀಚೆಗಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ವಾರಸ್ಧಾರನನ್ನು ಪಡೆದು ಸಂತಸದಿಂದಿದ್ದಾರೆ. ಆದರೆ ಇದೀಗ  ಅವರ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ.


ಹೌದು. ಇತ್ತೀಚೆಗೆ ನಟ ಶಾಹಿದ್ ಕಪೂರ್ ಅವರು ಟ್ವೀಟರ್ ಖಾತೆಯಲ್ಲಿ ನಟಿ ಕತ್ರಿನಾ ಕೈಫ್​ಗೆ ಪ್ರಪೋಸ್​ ಮಾಡಿದ್ದಾರೆ. 'ಐ ಲವ್​ ಯು ಕತ್ರಿನಾ ಕೈಫ್'​ ಎಂದು ಟ್ವಿಟ್ ಮಾಡಿದ್ದಾರೆ. ಹಾಗೇ ಮತ್ತೊಂದು ಟ್ವೀಟ್ ನಲ್ಲಿ ಪದ್ಮಾವತ್ ಚಿತ್ರದಲ್ಲಿ ಸೂಕ್ತ ಪಾತ್ರ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.


ಆದರೆ ವಿಷಯ ಏನೆಂದರೆ ಈ ಟ್ವೀಟ್ಗಳನ್ನು ನಟ ಶಾಹಿದ್ ಕಪೂರ್ ಮಾಡಲಿಲ್ಲವಂತೆ. ಹಾಗಾದ್ರೆ ಇದನ್ನು ಮಾಡಿದ್ಯಾರು ಗೊತ್ತಾ? ಹ್ಯಾಕರ್ಸ್ ಗಳು. ಹೌದು ಈಗ ಸಾಮಾಜಿಕ ಜಾಲಾತಾಣದಲ್ಲಿ ಹ್ಯಾಕರಸ್ ಗಳ ಹಾವಳಿ ಹೆಚ್ಚಾಗಿದ್ದು, ಇದೀಗ  ನಟ ಶಾಹಿದ್ ಕಪೂರ್ ಟ್ವಿಟ್ಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ.


ಕೂಡಲೇ ಎಚ್ಚೆತ್ತುಕೊಂಡಿರುವ ಶಾಹೀದ್​ ಇನ್​ಸ್ಟಾಗ್ರಾಂನಲ್ಲಿ ಹ್ಯಾಕರ್​​ಗಳಿಂದ ಮುಕ್ತವಾಗಿಸಿಕೊಂಡಿದ್ದಾರೆ. ಟ್ವಿಟ್ಟರ್​​ ಖಾತೆಯನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ