ತೋತಾಪುರಿ ರಿಲೀಸ್ ಡೇಟ್ ಬಹಿರಂಗ
ಈ ಸಿನಿಮಾ ಬಗ್ಗೆ ಜಗ್ಗೇಶ್ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆಯಿದೆ. ಈ ಮೊದಲು ಮಠ ಸಿನಿಮಾ ಮಾಡಿದ್ದ ವಿಜಯ್ ಪ್ರಸಾದ್ ಜೊತೆಗೆ ಜಗ್ಗೇಶ್ ಈ ಸಿನಿಮಾ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಬಾಗ್ಲು ತೆಗಿ ಮೇರಿ ಜಾನ್ ಎಂಬ ಹಾಡು ಭರ್ಜರಿ ಹಿಟ್ ಆಗಿತ್ತು.
ಇದೀಗ ದಸರಾ ಹಬ್ಬಕ್ಕೆ ಅಂದರೆ ಸೆಪ್ಟೆಂಬರ್ 30 ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಇದು ಜಗ್ಗೇಶ್ ಸಿನಿಮಾ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಿನ ಸಿನಿಮಾವಾಗಲಿದೆ ಎಂದೇ ನಂಬಲಾಗಿದೆ.