ಹಿಂದಿಯಲ್ಲಿ ಕನ್ನಡ ನಟ ಜೆಕೆ ರಾವಣನ ಅವತಾರ ಶುರು

ಭಾನುವಾರ, 18 ಆಗಸ್ಟ್ 2019 (09:14 IST)
ಬೆಂಗಳೂರು: ಕನ್ನಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹಿಂದಿ ಪೌರಾಣಿಕ ಧಾರವಾಹಿಯೊಂದರಲ್ಲಿ ನಟಿಸುತ್ತಿರುವ ವಿಚಾರ ಹಿಂದೊಮ್ಮೆ ಓದಿರುತ್ತೀರಿ.

 

ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಜೆಕೆ ಸಿಯಾ ಕಾ ರಾಮ್ ಎಂಬ ಹಿಂದಿ ಧಾರವಾಹಿಯಲ್ಲಿ ರಾವಣನ ಪಾತ್ರ ನಿಭಾಯಿಸಿದ್ದರು. ಈಗ ಮತ್ತೆ ಸ್ಟಾರ್ ಭಾರತ್ ವಾಹಿನಿಯ ಮತ್ತೊಂದು ರಾಮಾಯಣದ ಪೌರಾಣಿಕ ಕತೆಯಿರುವ ಹಿಂದಿ ಧಾರವಾಹಿಯಲ್ಲಿ ಜೆಕೆ ರಾವಣನ ಪಾತ್ರ ಮಾಡುತ್ತಿದ್ದಾರೆ.

ಆ ಧಾರವಾಹಿಯ ಶೂಟಿಂಗ್ ಆರಂಭವಾಗಿದ್ದು, ಜೆಕೆ ತಮ್ಮ ಲುಕ್ ರಿವೀಲ್ ಮಾಡಿದ್ದಾರೆ. ಜೆಕೆ ಲುಕ್ ನೋಡಿದ ಅಭಿಮಾನಿಗಳು ನೀವು ಕುರುಕ್ಷೇತ್ರ ಸಿನಿಮಾದಲ್ಲಿ ಪಾತ್ರ ಮಾಡಬೇಕಿತ್ತು ಎಂದು ಹೊಗಳುತ್ತಿದ್ದಾರೆ. ಅಂತೂ ಸದ್ದಿಲ್ಲದೇ ಕನ್ನಡ ನಟನೊಬ್ಬ ಹಿಂದಿ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ