ಚಿತ್ರತಂಡದ ಮೇಲೆ ಅಸಮಾಧಾನ: ಮಹೇಶ್ ಬಾಬು ಸಿನಿಮಾದಿಂದ ಹೊರಬಂದ ಪೂಜಾ ಹೆಗ್ಡೆ

ಮಂಗಳವಾರ, 20 ಜೂನ್ 2023 (16:52 IST)
Photo Courtesy: Twitter
ಹೈದರಾಬಾದ್: ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ ಸಿನಿಮಾದಿಂದ ಸೌತ್ ಬೆಡಗಿ ಪೂಜಾ ಹೆಗ್ಡೆ ಹೊರಬಂದಿದ್ದಾರೆ.

ಚಿತ್ರದ ಪ್ರಮುಖ ನಾಯಕಿಯಾಗಿ ಪೂಜಾ ಹೆಗ್ಡೆ ಮತ್ತು ಎರಡನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದರು. ಆದರೆ ಇದೀಗ ಚಿತ್ರತಂಡದ ಮೇಲೆ ಅಸಮಾಧಾನಗೊಂಡ ಪೂಜಾ ಹೊರಬರಲು ತೀರ್ಮಾನಿಸಿದ್ದಾರೆ.

ಪದೇ ಪದೇ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡುತ್ತಿರುವುದು, ಎರಡನೇ ಹಂತದ ಶೂಟಿಂಗ್ ತಡ ಮಾಡುತ್ತಿರುವುದು ಮತ್ತು ಈಗಾಗಲೇ ಶೂಟ್ ಮಾಡಿರುವ ದೃಶ್ಯಗಳನ್ನು ಮತ್ತೆ ರಿ ಶೂಟ್ ಮಾಡುತ್ತಿರುವುದು ಪೂಜಾ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಡೇಟ್ ಸಮಸ್ಯೆ ನೆಪವೊಡ್ಡಿ ಹೊರಬಂದಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಶ್ರೀಲೀಲಾಗೆ ಪ್ರಾಮುಖ್ಯತೆಯಿರುವುದು ಪೂಜಾ ಅಸಮಾಧಾನಕ್ಕೆ ಕಾರಣವಾಗಿರಬಹುದೇ ಎಂಬ ಅನುಮಾನಗಳೂ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ