ಪ್ರಭಾಸ್, ಅಮಿತಾಭ್, ದೀಪಿಕಾ ಬಳಿಕ ಪ್ರಾಜೆಕ್ಟ್ ಕೆ ಸೇರಿಕೊಂಡ ಕಮಲ್ ಹಾಸನ್

ಭಾನುವಾರ, 25 ಜೂನ್ 2023 (17:59 IST)
Photo Courtesy: Twitter

ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಾಜೆಕ್ಟ್ ಕೆ ಸಿನಿಮಾ ತಾರಾಗಣಕ್ಕೆ ಮತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದೆ. ಅವರೇ ಕಮಲ್ ಹಾಸನ್.

 ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ನಂತಹ ಸೂಪರ್ ಸ್ಟಾರ್ ಗಳು ನಟಿಸುತ್ತಿದ್ದಾರೆ. ಇದೀಗ ಕಮಲ್ ಹಾಸನ್ ಕೂಡಾ ಸೇರ್ಪಡೆಯಾಗಿದ್ದಾರೆ. ಕಮಲ್ ಚಿತ್ರತಂಡ ಸೇರಿಕೊಳ್ಳುವ ಬಗ್ಗೆ ಈ ಮೊದಲೇ ರೂಮರ್ ಗಳಿತ್ತು. ಅದೀಗ ನಿಜವಾಗಿದೆ.

 ಈ ಸಿನಿಮಾದಲ್ಲಿ ಕಮಲ್ ವಿಲನ್ ಪಾತ್ರ ಮಾಡಲಿದ್ದು, ಪ್ರಭಾಸ್ ಜೊತೆ ತೆರೆ ಮೇಲೆ ಗುದ್ದಾಡಲಿದ್ದಾರೆ. ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಕಥಾ ಹಂದರವಿರುವ ಈ ಸಿನಿಮಾ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ