ನಿಜ ಜೀವನದಲ್ಲೂ ಲವ್ ಮಾಡ್ತಿದ್ದಾರಾ ಕಮಲಿ ಜೋಡಿ ನಿರಂಜನ್, ಅಮೂಲ್ಯ ಗೌಡ

Krishnaveni K

ಬುಧವಾರ, 11 ಡಿಸೆಂಬರ್ 2024 (14:06 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ನಿರಂಜನ್ ಮತ್ತು ಅಮೂಲ್ಯ ಗೌಡ ನಿಜ ಜೀವನದಲ್ಲೂ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಸೀರಿಯಲ್ ನಲ್ಲಿ ಇಬ್ಬರೂ ಗಂಡ-ಹೆಂಡತಿ ರೋಲ್ ಮಾಡಿದ್ದರು. ಇಬ್ಬರ ಕೆಮಿಸ್ಟ್ರಿ ನೋಡಿ ರಿಯಲ್ ಲೈಫ್ ನಲ್ಲೂ ಒಂದಾಗಿ ಎಂದು ಎಷ್ಟೋ ಜನ ಕಾಮೆಂಟ್ ಮಾಡುತ್ತಿದ್ದರು. ಸೀರಿಯಲ್ ಮುಗಿದ ಮೇಲೂ ಇಬ್ಬರ ನಡುವಿನ ಬಾಂಧವ್ಯ ಬಿದ್ದು ಹೋಗಿಲ್ಲ. ಈಗಲೂ ಜೊತೆ ಜೊತೆಗೇ ಇರುತ್ತಾರೆ.

ಇತ್ತೀಚೆಗೆ ಏರ್ ಪೋರ್ಟ್ ನಲ್ಲಿ ನಟ ಸೋನು ಸೂದ್ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೋದಲ್ಲೂ ಅಮೂಲ್ಯ ಜೊತೆಗೆ ನಿರಂಜನ್ ಇದ್ದಾರೆ. ಈಗ ಇಬ್ಬರೂ ಯಾವುದೇ ಶೋ ಜೊತೆಗೇ ಮಾಡದೇ ಇದ್ದರೂ ಜೊತೆ ಜೊತೆಯಾಗಿ ಓಡಾಡುತ್ತಿರುವುದನ್ನು ನೋಡಿ ಎಲ್ಲರೂ ಹುಬ್ಬೇರಿಸಿದ್ದರು.

ಆದರೆ ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎನ್ನುವುದಕ್ಕೆ ಇತ್ತೀಚೆಗಿನ ತೆಲುಗು ಟಾಕ್ ಶೋ ಒಂದರಲ್ಲಿ ಇಬ್ಬರೂ ನಡೆದುಕೊಂಡಿರುವ ರೀತಿ ಅನುಮಾನ ಹುಟ್ಟುಹಾಕಿದೆ. ಶೋನಲ್ಲಿ ನಿರಂಜನ್ ಗೆ ಕಾಲ್ ಮಾಡಲು ಅಮೂಲ್ಯಗೆ ಹೇಳುತ್ತಾರೆ. ನಿರಂಜನ್ ಕಾಲ್ ಎತ್ತಿದ ತಕ್ಷಣ ಅಮೂಲ್ಯ ಶೋನಲ್ಲಿದ್ದೀನಿ, ಸ್ಪೀಕರ್ ಹಾಕಿದ್ದೀನಿ ಎಂದು ಸೂಚನೆ ನೀಡುತ್ತಾರೆ. ತಕ್ಷಣ ಜಾಗೃತರಾಗುವ ನಿರಂಜನ್ ಹೇಗಿದ್ದೀರಾ ಎಂದು ಔಪಚಾರಿಕವಾಗಿ ಮಾತನಾಡುತ್ತಾರೆ. ಬಳಿಕ ನಿರೂಪಕಿ ಇಷ್ಟು ದೊಡ್ಡ ವಿಚಾರವನ್ನು ನನ್ನಿಂದ ಮುಚ್ಚಿಟ್ಟಿದ್ದು ಸರಿಯಲ್ಲ ಎಂದು ಇಬ್ಬರ ಲವ್ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾರೆ. ಆಗ ಅಮೂಲ್ಯ ನಾಚಿಕೊಂಡರೆ ನಿರಂಜನ್ ಜೋರಾಗಿ ನಗುತ್ತಾರೆ. ಜೊತೆಗೆ ಅಮೂಲ್ಯ ತಮ್ಮ ಮೊಬೈಲ್ ನಲ್ಲಿ ನಿರಂಜನ್ ನಂಬರ್ ನ್ನು ಮೈ ಟಾಮ್ ಎಂದು ಸೇವ್ ಮಾಡಿಕೊಂಡಿದ್ದಾರಂತೆ. ಇದೆಲ್ಲಾ ನೋಡಿ ಪ್ರೇಕ್ಷಕರು ಇವರು ಲವ್ ಮಾಡ್ತಿರೋದು ಪಕ್ಕಾ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ