ಗೀತಾ ಕನ್ನಡ ಹಾಡಿಗೆ ಪೈಪೋಟಿ ಕೊಡುವಂತಿದೆ ಕನ್ನಡ್ ಗೊತ್ತಿಲ್ಲ ಹಾಡು

ಬುಧವಾರ, 4 ಸೆಪ್ಟಂಬರ್ 2019 (08:51 IST)
ಬೆಂಗಳೂರು: ಗೀತಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ ಕನ್ನಡ ಥೀಮ್ ಹಾಡಿನ ಬಳಿಕ ಮತ್ತೊಂದು ಕನ್ನಡ ಭಾಷೆಯ ಕುರಿತಾದ ಹಾಡು ಬಿಡುಗಡೆಯಾಗಿದೆ.


ಗೀತಾ ಸಿನಿಮಾದಲ್ಲಿ ಪುನೀತ್ ಹಾಡಿದ್ದ ಕನ್ನಡ ಕನ್ನಡ ಎನ್ನುವ ಹಾಡು ಹಿಟ್ ಆಗಿತ್ತು. ಈಗ ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ರಘು ದೀಕ್ಷಿತ್ ಹಾಡಿರುವ ಕಲಿಯೋ ನೀ ಕನ್ನಡ ಎನ್ನುವ ಹಾಡು ಬಿಡುಗಡೆಯಾಗಿದೆ.

ಈ ಹಾಡು ಈಗ ಯೂ ಟ್ಯೂಬ್ ನಲ್ಲಿ 1 ಲಕ್ಷ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಆ ಮೂಲಕ ಹಿಟ್ ಲಿಸ್ಟ್ ಸೇರಿಕೊಂಡಿದೆ. ಬೆಂಗಳೂರಿಗೆ ಬಂದು ಕನ್ನಡ ಗೊತ್ತಿಲ್ಲ ಎನ್ನುವವರಿಗೆ ಸರಿಯಾಗಿ ಬುದ್ಧಿ ಹೇಳುವಂತಿದೆ ಈ ಪವರ್ ಫುಲ್ ಹಾಡು. ಹರಿಪ್ರಿಯಾ, ಸುಧಾರಾಣಿ ಮತ್ತಿತರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ