ರಾಕಿ ಬಾಯ್ ಕೆಜಿಎಫ್ v/s ಶಾರುಖ್ ಖಾನ್ ಜೀರೋ: ಆನ್ ಲೈನ್ ನಲ್ಲಿ ಜಟಾಪಟಿ

ಶುಕ್ರವಾರ, 21 ಡಿಸೆಂಬರ್ 2018 (08:46 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮತ್ತು ಬಾಲಿವುಡ್ ನ ಜೀರೋ ಚಿತ್ರ ಒಂದೇ ದಿನ ಅಂದರೆ ಇಂದು ಬಿಡುಗಡೆಯಾಗಿದ್ದು, ಈ ಎರಡೂ ಚಿತ್ರಗಳ ಪರವಾಗಿ ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ನಾ ಹೆಚ್ಚು ನಾ ಹೆಚ್ಚು ಎಂದು ಪೈಪೋಟಿಗಿಳಿದಿದ್ದಾರೆ.


ಕೆಜಿಎಫ್ ಜೀರೋ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ ದಾಖಲೆ ಬರೆಯಲಿದೆ ಎಂದು ರಾಕಿ ಬಾಯ್ ಅಭಿಮಾನಿಗಳು ಬೀಗುತ್ತಿದ್ದಾರೆ. ಆದರೆ ಇದರ ಬಗ್ಗೆ ಜೀರೋ ಚಿತ್ರದ ವಿತರಕರು ನಮ್ಮ ಚಿತ್ರ ಮೂರು ದಿನಗಳಲ್ಲಿ ಗಳಿಸುವುದನ್ನು ಕೆಜಿಎಫ್ ನೂರು ದಿನವೂ ಗಳಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಕೆಜಿಎಫ್ v/s ಜೀರೋ ಜಟಾಪಟಿ ನಡೆಯುತ್ತಿದ್ದು, ಅಭಿಮಾನಿಗಳು ನಮ್ಮ ಚಿತ್ರವೇ ಗೆಲ್ಲುವುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಎರಡೇ ದಿನದಲ್ಲಿ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ