ಅಮೆರಿಕಾಗೆ ಚಿಕಿತ್ಸೆಗೆ ತೆರಳಲಿರುವ ಶಿವಣ್ಣನ ಬೀಳ್ಕೊಡಲು ಒಂದಾದ ಗಣ್ಯರು

Krishnaveni K

ಬುಧವಾರ, 18 ಡಿಸೆಂಬರ್ 2024 (14:10 IST)
Photo Credit: X
ಬೆಂಗಳೂರು: ಲಿವರ್ ಗೆ ಸಂಬಂಧಪಟ್ಟ ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಗೆ ತೆರಲುವ ಮೊದಲು ಇಂದು ಅವರ ಸ್ನೇಹಿತರು ಜೊತೆ ಸೇರಿ ಹಾರೈಸಿದ್ದಾರೆ.

ಕಿಚ್ಚ ಸುದೀಪ್, ಮಾಜಿ ಸಚಿವ ಬಿಸಿ ಪಾಟೀಲ್, ಸಚಿವ ಮಧು ಬಂಗಾರಪ್ಪ, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸೇರಿದಂತೆ ಚಿತ್ರರಂಗ, ರಾಜಕೀಯದ ಸ್ನೇಹಿತರು ಶಿವರಾಜ್ ಕುಮಾರ್ ನಿವಾಸಕ್ಕೆ ಬಂದು ಅವರಿಗೆ ಹಾರೈಸಿದ್ದಾರೆ.

ಇಂದು ರಾತ್ರಿ 8.30 ಕ್ಕೆ ಪತ್ನಿ ಗೀತಾ ಜೊತೆಗೆ ಶಿವಣ್ಣ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕೆ ಮೊದಲು ಸ್ನೇಹಿತರು ಅವರನ್ನು ಭೇಟಿ ಮಾಡಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಸೌಖ್ಯವಾಗಿ ಮರಳಿ ಬರಲೆಂದು ಹಾರೈಸಿದ್ದಾರೆ.

ನಟ ವಿನೋದ್ ರಾಜ್ ಕೂಡಾ ಶಿವಣ್ಣನನ್ನು ಭೇಟಿಯಾಗಲು ಬಂದಿದ್ದು ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ತಂದು ಶಿವಣ್ಣನಿಗೆ ನೀಡಿ ಆರೋಗ್ಯ ಸರಿಯಾಗಲಿ ಎಂದು ಹಾರೈಸಿದ್ದಾರೆ. ಶಿವಣ್ಣನಿಗೆ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೇ ಚಿತ್ರರಂಗದ ಅನೇಕರು ಅವರಿಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದರು. ಇದೀಗ ಅಮೆರಿಕಾಗೆ ತೆರಳುವ ಮೊದಲು ಕಾವೇರಿ ತಾಯಿಗೆ ಬಾಗಿನ, ತಿರುಪತಿ ತಿಮ್ಮಪ್ಪನಿಗೆ ಪೂಜೆ ಮಾಡಿ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾರೆ. ಇನ್ನು ಒಂದು ತಿಂಗಳು ಅವರು ಅಲ್ಲಿಯೇ ಇರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ