ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!
‘ಡಾರ್ಲಿಂಗ್ ಕಿಚ್ಚ ಜತೆ ಸಣ್ಣ ಕ್ಯಾಂಟೀನ್ ಒಂದರಲ್ಲಿ ಚಹಾ ಸೇವಿಸುತ್ತಿದ್ದೇನೆ. ಇಲ್ಲಿನ ಚಳಿ ವಾತಾವರಣಕ್ಕೆ ಇದು ಅದ್ಭುತ ಅನುಭವವಾಗಿದೆ’ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ‘ಇಂತಹ ಸಣ್ಣ ಕ್ಯಾಂಟೀನ್ ಗಳಲ್ಲೇ ಬೆಸ್ಟ್ ಚಹಾ ಸಿಗುವುದು. ಈ ಅನುಭವ ಅದ್ಭುತ’ ಎಂದು ಬಾಯಿ ಚಪ್ಪರಿಸಿದ್ದಾರೆ.