ಕೊರೋನಾ ಭೀತಿ: ಅನ್ನಾಹಾರವಿಲ್ಲದೇ 100 ಕಿ.ಮೀ. ನಡೆದ ಗರ್ಭಿಣಿ ಮಹಿಳೆ, ಪತಿ

ಸೋಮವಾರ, 30 ಮಾರ್ಚ್ 2020 (10:05 IST)
ಮೀರತ್: ಕೊರೋನಾ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಆದೇಶಿಸುತ್ತಿದ್ದಂತೇ ಸಂಕಷ್ಟಕ್ಕೀಡಾಗಿದ್ದು ಕೂಲಿ ಕಾರ್ಮಿಕರು. ಇದಕ್ಕೆ ಸ್ಪಷ್ಟ ಉದಾಹರಣೆ ಈ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿಯದ್ದು.


ಶಹರಾನ್ ಪುರನಿಂದ ಸುಮಾರು 100 ಕಿ.ಮೀ. ದಾರಿಯನ್ನು ನಡೆದೇ ಕ್ರಮಿಸಲು ಹೊರಟಿದ್ದ ಎಂಟು ತಿಂಗಳ ಗರ್ಭಿಣಿ ಮತ್ತು ಆಕೆಯ ಪತಿಯನ್ನು ಮೀರತ್ ನಲ್ಲಿ ಸ್ಥಳೀಯರು ರಕ್ಷಿಸಿದ್ದಾರೆ.

ಪತಿಗೆ ಕೆಲಸ ನೀಡಿದ್ದಾತ ವೇತನವನ್ನೂ ನೀಡದೇ ಕಳುಹಿಸಿದ್ದ. ಹೀಗಾಗಿ ಊಟಕ್ಕೂ ಗತಿಯಿಲ್ಲದೇ ತಮ್ಮ ಊರ ಕಡೆಗೆ ನಡೆದೇ ಪ್ರಯಾಣ ಆರಂಭಿಸಿದ್ದರು. ಬಳಿಕ ಸ್ಥಳೀಯರು ಧನಸಹಾಯ ಮಾಡಿದ್ದಲ್ಲದೆ, ಸ್ಥಳೀಯ ಪೊಲೀಸರಿಗೂ ಸುದ್ದಿ ಮುಟ್ಟಿಸ ಸಹಾಯ ನೀಡಲು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ