ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಟ್ಟಿಲ್ಲ ಅಂದ್ರೆ ಡಿಕೆ ಶಿವಕುಮಾರ್ ಒದ್ದು ಕಿತ್ಕೋತಾರೆ

Krishnaveni K

ಭಾನುವಾರ, 2 ಫೆಬ್ರವರಿ 2025 (13:20 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಒಳಗೊಳಗೇ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡದೇ ಇದ್ದರೆ ಡಿಕೆ ಶಿವಕುಮಾರ್ ಒದ್ದು ತೆಗೆದುಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

ಈ ಹಿಂದೆ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಮ್ಮನ್ನು ಮಂತ್ರಿ ಮಂಡಲದಿಂದ ಕೈ ಬಿಟ್ಟಿದ್ದಕ್ಕೆ ಬಾಗಿಲಿಗೆ ಒದ್ದು ಮಂತ್ರಿ ಪದವಿ ಪಡೆದಿದ್ದಾಗಿ ಡಿಕೆ ಶಿವಕುಮಾರ್ ಸದನದಲ್ಲಿ ಹೇಳಿಕೆ ನೀಡಿದ್ದರು. ಅದನ್ನೇ ಇಟ್ಟುಕೊಂಡು ಅಶೋಕ್ ಈಗ ಟಾಂಗ್ ಕೊಟ್ಟಿದ್ದಾರೆ.

ಇದಕ್ಕೆ ಮೊದಲು ಹೇಳಿಕೆ ನೀಡಿದ್ದ ಅವರು ನವಂಬರ್ 16,17 ಕ್ಕೆ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದಿದ್ದರು. ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಪದವಿಗಾಗಿ ನಡೆಯುತ್ತಿರುವ ಒಳಜಗಳದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ನವಂಬರ್ ವರೆಗೆ ಮ್ಯೂಸಿಕಲ್ ಚೇರ್ ನ ವಿಷಲ್ ಬರುತ್ತದೆ. ಸಿಎಂ ಕುರ್ಚಿ ಬಿಟ್ಟುಕೊಟ್ಟಿಲ್ಲ ಎಂದರೆ ಡಿಕೆ ಶಿವಕುಮಾರ್ ಒದ್ದು ಕಿತ್ಕೋತಾರೆ ಅಂತಾನೇ ಹೇಳಿದ್ದಾರೆ. ನಮ್ಗೂ ಗೊತ್ತಿದೆ, ನಿಖರವಾಗಿ ಹೇಳುತ್ತಾ ಇದ್ದೇನೆ. ಸಿಎಂ ಬದಲಾವಣೆಯಾಗೋದು ಪಕ್ಕಾ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ