ಬೆಳ್ಳಂ ಬೆಳಿಗ್ಗೆ ಫ್ಯಾನ್ಸ್ ಗೆ ಸರ್ಪೈಸ್ ಕೊಟ್ಟ ಕಿಚ್ಚ ಸುದೀಪ್

Krishnaveni K

ಮಂಗಳವಾರ, 16 ಜನವರಿ 2024 (09:19 IST)
ಬೆಂಗಳೂರು: ಕಿಚ್ಚ ಸುದೀಪ್ ಬೆಳಿಗ್ಗೆಯೇ ತಮ್ಮ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಬಹುದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲಾ ಸುದೀಪ್ ನೇರವಾಗಿ ಉತ್ತರಿಸಿದ್ದಾರೆ.

ಅಪರೂಪಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಸುದೀಪ್ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ. ಈ ಮೂಲಕ ಬೆಳ್ಳಂ ಬೆಳಿಗ್ಗೆಯೇ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ.

ಅಭಿಮಾನಿಯೊಬ್ಬರು ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಯಾವಾಗ ಎಂದು ಕೇಳಿದ್ದಾರೆ. ಇದಕ್ಕೆ ಪ್ರತ್ಯೇಕವಾಗಿ ಉತ್ತರಿಸಿರುವ ಸುದೀಪ್ ಸಂಕ್ರಾಂತಿ ಬಳಿಕ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ತೆರಳುತ್ತಿದ್ದೇನೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಕಲಾವಿದರ ವಾಯ್ಸ್ ಓವರ್ ಪ್ರಕ್ರಿಯೆ ಮುಗಿದಿದೆ. ಕೊನೆಯ ಹಂತದ ಶೂಟಿಂಗ್ ಜಾರಿಯಲ್ಲಿದೆ. ನಿಮ್ಮ ಪ್ರೀತಿ, ಕುತೂಹಲ ಚಿತ್ರತಂಡಕ್ಕೂ ಅರ್ಥವಾಗುತ್ತಿದೆ. ಸಿನಿಮಾ ಶೂಟಿಂಗ್ ಆದ ಮೇಲಷ್ಟೇ ಅಪ್ ಡೇಟ್ ಕೊಡಲು ಸಾಧ‍್ಯ. ಎಲ್ಲವೂ ರೆಡಿಯಾದ ಮೇಲೆ ಚಿತ್ರತಂಡ ಖಂಡಿತವಾಗಿಯೂ ನಿಮಗೆ ಅಪ್ ಡೇಟ್ ಕೊಡಲಿದೆ’ ಎಂದಿದ್ದಾರೆ.

ಇನ್ನು ಪ್ರಶ್ನೋತ್ತರಾವಳಿಯಲ್ಲಿ ನಿಮಗೆ ಏನಾದರೂ ಕಷ್ಟ ಬಂದಾಗ ಅಭಿಮಾನಿಗಳನ್ನು ಬಿಟ್ಟರೆ ಚಿತ್ರರಂಗದಲ್ಲಿ ಯಾರೂ ಜೊತೆಗೆ ನಿಲ್ಲಲ್ವಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸುದೀಪ್ ನಿಮ್ಮೆಲ್ಲರ ಪ್ರೀತಿ, ವಿಶ್ವಾಸವೇ ನನಗೆ ಬಲ ಎಂದಿದ್ದಾರೆ. ಪ್ರಶ್ನೋತ್ತರಾವಳಿಯಲ್ಲಿ ಅನೇಕ ಯಶ್, ರಾಜಮೌಳಿ, ಸಲ್ಮಾನ್ ಖಾನ್, ಅಲ್ಲು ಅರ್ಜುನ್ ಮುಂತಾದವರ ಬಗ್ಗೆಯೂ ಪ್ರಶ್ನೆ ಕೇಳಲಾಗಿದ್ದು, ಎಲ್ಲದಕ್ಕೂ ಸುದೀಪ್ ಕೂಲ್ ಆಗಿ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ