ಬೆಂಗಳೂರು: ರೇಪ್ ಕೇಸ್ ನಲ್ಲಿ ಬಂಧಿತರಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿ ಮಡೆನೂರು ಮನು ದರ್ಶನ್, ಶಿವಣ್ಣ ವಿರುದ್ಧ ನೀಡಿರುವ ಹೇಳಿಕೆಗಳ ಅಡಿಯೋ ವೈರಲ್ ಆಗುತ್ತಿದ್ದಂತೇ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಡೆನೂರು ಮನು ಹೇಳಿದ್ದು ನಿಜವೇ ಆಗಿದ್ದರೆ ಎಂದು ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
ಸಹ ನಟಿ ಮೇಲೆ ರೇಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಅರೆಸ್ಟ್ ಆಗಿದ್ದಾರೆ. ಈ ನಡುವೆ ಅವರದ್ದು ಎನ್ನಲಾದ ಅಡಿಯೋವೊಂದು ವೈರಲ್ ಆಗಿದೆ. ದರ್ಶನ್ ಸತ್ತೋದ, ಶಿವಣ್ಣ ಇನ್ನು ಆರು ವರ್ಷ ಆಮೇಲೆ ನಾನೇ ಹೀರೋ ಎಂದು ಮನು ಕೊಚ್ಚಿಕೊಂಡಿರುವ ಅಡಿಯೋ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಯಾರೋ ದಾರಿಲಿ ಹೋಗೋರೆಲ್ಲಾ ನಮ್ಮ ಅಣ್ಣಂಗೆ ಕಾಂಪಿಟೀಷನ್ ಕೊಡುವ ಹಾಗಾದ್ರಾ? ಮರ್ಡರ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆಯೂ ಅವರ ಜನಪ್ರಿಯತೆ ಕಮ್ಮಿಯಾಗಿಲ್ಲ. ಅಂದ ಮೇಲೆ ಈ ನಟನೆಲ್ಲಾ ಯಾವ ಲೆಕ್ಕ ಎಂದು ಎಂದು ಡಿಬಾಸ್ ಫ್ಯಾನ್ಸ್ ರೊಚ್ಚಿಗೆದ್ದು ಕಾಮೆಂಟ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ, ಮಡೆನೂರು ಮನು ವಿರುದ್ಧ ದೂರು ಕೂಡಾ ದಾಖಲಿಸಿದ್ದಾರೆ. ಮನು ವಿರುದ್ಧ ಶಿವಣ್ಣ ಪರವಾಗಿ ಡಾ. ರಾಜ್ ಕುಟುಂಬದ ಅಭಿಮಾನಿ ಸಂಘದವರು ಮತ್ತು ದರ್ಶನ್ ಪರವಾಗಿ ಅವರ ಅಭಿಮಾನಿಗಳು ಒಂದಾದ ಮೇಲೊಂದರಂತೆ ಕೇಸ್ ದಾಖಲಿಸುತ್ತಿದ್ದಾರೆ. ಇದರಿಂದಾಗಿ ಈಗ ಮನು ಮೇಲೆ ರೇಪ್ ಕೇಸ್ ಜೊತೆಗೆ ನೂರಾರು ಕೇಸ್ ಗಳು ಜಡಿದಂತಾಗಿದೆ.