ರಾಜಮೌಳಿ ಸಿನಿಮಾಗೆ ಮಹೇಶ್ ಬಾಬುಗೆ ಸಂಭಾವನೆಯೇ ಇಲ್ಲ!

Krishnaveni K

ಬುಧವಾರ, 31 ಜನವರಿ 2024 (09:41 IST)
Photo Courtesy: Twitter
ಹೈದರಾಬಾದ್: ಗುಂಟೂರು ಖಾರಂ ಸಿನಿಮಾ ಬಳಿಕ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಈಗ ರಾಜಮೌಳಿ ಜೊತೆಗಿನ ಸಿನಿಮಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಕೇಳಬೇಕೆ? ಹಿಟ್ ಗ್ಯಾರಂಟಿ ಎನ್ನುವ ನಂಬಿಕೆಯಿದೆ. ಅದಕ್ಕೆ ತಕ್ಕಂತೆ ಅವರ ಹೆಚ್ಚಿನ ಎಲ್ಲಾ ಸಿನಿಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿವೆ. ಇದಕ್ಕೆ ಅವರು ಹಾಕುವ ಶ್ರಮ, ತಯಾರಿ ಕೂಡಾ ಕಾರಣ.

ಆರ್ ಆರ್ ಆರ್ ಸಿನಿಮಾ ಬಳಿಕ ರಾಜಮೌಳಿ ಕೈಗೆತ್ತಿಕೊಳ್ಳುತ್ತಿರುವ ಸಿನಿಮಾಗೆ ಮಹೇಶ್ ಬಾಬು ನಾಯಕ. ಈ ಸಿನಿಮಾ ಮೂಲಕ ಫ್ಯಾಂಟಸಿ ಥ್ರಿಲ್ಲರ್ ಕತೆ ಹೇಳಲು ಹೊರಟಿದ್ದಾರೆ ರಾಜಮೌಳಿ. ಕಳೆದ ಒಂದು ವರ್ಷದಿಂದ ಸಿನಿಮಾಗೆ ತಯಾರಿಯೂ ತೆರೆ ಮರೆಯಲ್ಲಿ ನಡೆಯುತ್ತಲೇ ಇದೆ. ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ರಾಜಮೌಳಿ ಈಗಾಗಲೇ ಹಾಲಿವುಡ್ ತಂತ್ರಜ್ಞರ ಜೊತೆ ಕೈ ಜೋಡಿಸಿದ್ದಾರೆ.

ಈಗಾಗಲೇ ಮಹೇಶ್ ಬಾಬು ಸಿನಿಮಾಗೆ ತಯಾರಿ ನಡೆಸಲು ವಿದೇಶ ಪ್ರವಾಸ ಮಾಡಿ ಬಂದಿದ್ದರು. ಇದೀಗ ಈ ಸಿನಿಮಾಗೆ ಮಹೇಶ್ ಬಾಬು ಪಡೆಯಲಿರುವ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಮಹೇಶ್ ಬಾಬು ಈ ಸಿನಿಮಾಗೆ ಸಂಭಾವನೆಯನ್ನೇ ಪಡೆಯುತ್ತಿಲ್ಲವಂತೆ!

ಸಾಮಾನ್ಯವಾಗಿ ಮಹೇಶ್ ಬಾಬು ಒಂದು ಸಿನಿಮಾಗೆ 60-80 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಈ ಸಿನಿಮಾಗೆ ಅವರು ಹಣದ ರೂಪದಲ್ಲಿ ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಅದರ ಬದಲಿಗೆ ಚಿತ್ರದ ಲಾಭದಲ್ಲಿ ಪಾಲು ಪಡೆಯಲು ನಿರ್ಧರಿಸಿದ್ದಾರೆ.

ರಾಜಮೌಳಿ ಸಿನಿಮಾವೆಂದರೆ ಕೋಟ್ಯಾಂತರ ರೂಪಾಯಿ ಲಾಭ ಮಾಡುವುದು ಗ್ಯಾರಂಟಿ. ಹೀಗಾಗಿ ರಾಜಮೌಳಿ ಹಾಗೂ ಮಹೇಶ್ ಬಾಬು ಚಿತ್ರದ ಲಾಭದಲ್ಲಿ ಪಾಲು ಪಡೆಯಲು ನಿರ್ಧರಿಸಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ