ರಾಜಮೌಳಿ ಜೊತೆ ಸಿನಿಮಾಗೆ ಮಹೇಶ್ ಬಾಬುಗೆ ಜರ್ಮನಿಯಲ್ಲಿ ಟ್ರೈನಿಂಗ್!
ಇತ್ತೀಚೆಗಷ್ಟೇ ಮಹೇಶ್ ಬಾಬು ತಮ್ಮ ಚಿತ್ರತಂಡದೊಂದಿಗೆ ಗುಂಟೂರು ಖಾರಂ ಸಿನಿಮಾ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಅದರ ಬೆನ್ನಲ್ಲೇ ಅವರೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಸಿದ ಬಳಿಕ ಮಹೇಶ್ ಬಾಬು ಕುಟುಂಬ ಸಮೇತರಾಗಿ ಪ್ರವಾಸ ತೆರಳುತ್ತಾರೆ. ಆದರೆ ಈ ಬಾರಿ ಏಕಾಂಗಿಯಾಗಿ ವಿದೇಶ ಪ್ರವಾಸ ಮಾಡಿದ್ದಾರೆ. ಇದಕ್ಕೆ ಕಾರಣ ರಾಜಮೌಳಿ ಜೊತೆಗಿನ ಅವರ ಮುಂದಿನ ಸಿನಿಮಾ.
ಜರ್ಮನಿಯಲ್ಲಿ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ಸಂಬಂಧಪಟ್ಟಂತೆ ತಾಂತ್ರಿಕವಾಗಿ ಕಲಿಯಲು ಮಹೇಶ್ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ರಾಜಮೌಳಿ ಜೊತೆ ಸಾಹಸಮಯ ಸಿನಿಮಾವೊಂದನ್ನು ಮಹೇಶ್ ಬಾಬು ಮಾಡಲಿದ್ದಾರೆ. ಈ ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ನಿರ್ಮಿಸಲು ರಾಜಮೌಳಿ ತಯಾರಿ ನಡೆಸಿದ್ದಾರೆ. ಹೀಗಾಗಿ ಅದಕ್ಕೆ ತಯಾರಿ ಮಾಡಲು ಮಹೇಶ್ ಬಾಬು ಜರ್ಮನಿಗೆ ತೆರಳಿದ್ದಾರೆ ಎನ್ನಲಾಗಿದೆ.