ರಾಜಮೌಳಿಗೆ ವರ್ಷಗಟ್ಟಲೆ ಸಿನಿಮಾ ಮಾಡಲು ಸಯಮ ಕೊಡಲ್ವಂತೆ ಮಹೇಶ್ ಬಾಬು

ಶುಕ್ರವಾರ, 8 ಜುಲೈ 2022 (09:30 IST)
ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ಯಾವುದೇ ಸಿನಿಮಾಗೆ ಕನಿಷ್ಠ ಮೂರು ವರ್ಷವಾದರೂ ತೆಗೆದುಕೊಳ್ಳುತ್ತಾರೆ.

ಇದಕ್ಕೆ ಬಾಹುಬಲಿ, ಆರ್ ಆರ್ ಆರ್ ಸಿನಿಮಾಗಳೇ ಸಾಕ್ಷಿ. ಇದೀಗ ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಹೊರಟಿದ್ದಾರೆ. ಇದಕ್ಕೆ ಪ್ರಿ ಪ್ರೊಡಕ್ಷನ್ ಕೆಲಸಗಳೂ ಶುರುವಾಗಿದೆ.

ಆದರೆ ಮೂಲಗಳ ಪ್ರಕಾರ ಎಲ್ಲರಂತೆ ಮಹೇಶ್ ಬಾಬು ಈ ಸಿನಿಮಾ ಶೂಟಿಂಗ್ ‍ನ್ನು ವರ್ಷಗಟ್ಟಲೆ ಎಳೆಯುವಂತಿಲ್ಲ ಎಂದು ಷರತ್ತು ಹಾಕಿದ್ದಾರಂತೆ. ಮಹೇಶ್ ಬಾಬು ಬಹುಬೇಡಿಕೆಯ ನಟ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಾಗಿ ಒಂದೇ ಸಿನಿಮಾಗೆ ತುಂಬಾ ದಿನ ತೆಗೆದುಕೊಂಡರೆ ಉಳಿದ ನಿರ್ಮಾಪಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ತಮ್ಮ ಭಾಗದ ಚಿತ್ರೀಕರಣವನ್ನು ಬೇಗನೇ ಮುಗಿಸಿಕೊಡಲು ಸೂಚನೆ ನೀಡಿದ್ದಾರಂತೆ ಮಹೇಶ್ ಬಾಬು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ