ಹಿಮಾಲಯದಲ್ಲಿ ಸಿಲುಕಿಕೊಂಡ ಮಲಯಾಳ ನಟಿ ಮಂಜುವಾರಿಯರ್

ಬುಧವಾರ, 21 ಆಗಸ್ಟ್ 2019 (10:27 IST)
ನವದೆಹಲಿ: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಂಜುವಾರಿಯರ್ ಮತ್ತು ಚಿತ್ರತಂಡ ಹಿಮಾಲಯದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ನಂತರ ಅವರನ್ನು ರಕ್ಷಿಸಲಾಗಿದೆ.


ಛತ್ರು ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಮಂಜು ವಾರಿಯರ್ ಮತ್ತು ಚಿತ್ರತಂಡದವರನ್ನು ಇದಿಗ ರಕ್ಷಿಸಿ ಬೇಸ್ ಕ್ಯಾಂಪ್ ಗೆ ಕರೆತರಲಾಗಿದೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಹೇಳಿದಾರೆ.

ಮುಂಬರುವ ಚಿತ್ರ ಕಾಯಟ್ಟಂ ಚಿತ್ರೀಕರಣಕ್ಕಾಗಿ ಚಿತ್ರತಂಡ ಇಲ್ಲಿ ಬೀಡುಬಿಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೇ ಸ್ಥಳೀಯ ಜಿಲ್ಲಾಡಳಿತವನ್ನು ಸಂಪರ್ಕಿಸಿದ ಸಚಿವರು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ