ಬಡವರಿಗೆ ರಸ್ತೆ ಬದಿಯಲ್ಲಿ ಗಿಫ್ಟ್ ಕೊಟ್ಟ ನಯನತಾರಾ ದಂಪತಿ

ಗುರುವಾರ, 5 ಜನವರಿ 2023 (08:50 IST)
Photo Courtesy: Twitter
ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಹೊಸ ವರ್ಷವನ್ನು ವಿಶಿಷ್ಟವಾಗಿ ಬರಮಾಡಿಕೊಂಡಿದ್ದಾರೆ.

ಚೆನ್ನೈನಲ್ಲಿ ಬಡವರಿಗೆ ಗಿಫ್ಟ್ ಬಾಕ್ಸ್ ಹಂಚಿದ ದಂಪತಿ ಹೊಸ ವರ್ಷ ಆಚರಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಬಡ ಮಹಿಳೆಯರಿಗೆ, ಮಕ್ಕಳಿಗೆ ಗಿಫ್ಟ್ ಚೀಲ ಹಂಚುತ್ತಿರುವ ನಯನತಾರಾ ದಂಪತಿ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೊಸ ವರ್ಷದ ದಿನ ನಯನತಾರಾ ದಂಪತಿ ತಮ್ಮ ಅವಳಿ ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ