ಪೈಲ್ವಾನ್ ಬಗ್ಗೆ ನೆಗೆಟಿವ್ ಕಾಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದ ಚಿತ್ರತಂಡ

ಸೋಮವಾರ, 16 ಸೆಪ್ಟಂಬರ್ 2019 (10:14 IST)
‘ಬೆಂಗಳೂರು: ಪೈಲ್ವಾನ್ ಸಿನಿಮಾ ಬಿಡುಗಡೆಯಾದ ಬಳಿಕ ಕಿಚ್ಚ ಸುದೀಪ್ ಅಭಿನಯದ ಬಗ್ಗೆ ಯಾರಿಗೂ ತಕರಾರು ಇಲ್ಲದಿದ್ದರೂ ಪೈಲ್ವಾನ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಋಣಾತ್ಮಕವಾಗಿ ಬರೆದುಕೊಂಡಿದ್ದಾರೆ.


ಪೈಲ್ವಾನ್ ಕತೆ ಚೆನ್ನಾಗಿಲ್ಲ, ಸುದೀಪ್ ಇಂತಹ ಸಿನಿಮಾ ಮಾಡಬಾರದಿತ್ತು ಎಂದೆಲ್ಲಾ ಕೆಲವರು ಸುದ್ದಿ ಹಬ್ಬಿಸಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕರು ಇಂತಹ ನೆಗೆಟಿವ್ ಕಾಮೆಂಟ್ ಗಳಿಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕಿ ಸ್ವಪ್ನ ಕೃಷ್ಣ ‘ನಾವು ಪ್ರಾಮಾಣಿಕವಾಗಿ ಚಿತ್ರ ಮಾಡಿದ್ದೇವೆ. ನೀವೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದೀರಿ. ಆದರೆ ಕೆಲವರು ಅಪಪ್ರಚಾರ ಮಾಡುತ್ತಿರುವದರ ಬಗ್ಗೆ ನಮ್ಮ ತಂಡ ತಲೆಕೆಡಿಸಿಕೊಂಡಿಲ್ಲ. ನೀವು ಒಳ್ಳೆದು ಬಯಸಿದ್ರೂ ಕೆಟ್ಟದು ಬಯಸಿದ್ರೂ ಅದರ 10 ಪಟ್ಟು ನಿಮಗೆ ವಾಪಸ್ ಸಿಗುತ್ತದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ