ಕಿಚ್ಚ ಸುದೀಪ್ ಆಯ್ತು, ಈಗ ಟಾಲಿವುಡ್ ನ ಅಜಿತ್ ಗೆ ಒಟಿಟಿ ಭರ್ಜರಿ ಆಫರ್!
ಬುಧವಾರ, 12 ಜನವರಿ 2022 (09:19 IST)
ಚೆನ್ನೈ: ಕೊರೋನಾದಿಂದಾಗಿ ಥಿಯೇಟರ್ ಗಳ ಮೇಲೆ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ ಇದನ್ನೇ ಒಟಿಟಿ ಫ್ಲ್ಯಾಟ್ ಫಾರಂಗಳು ಬಂಡವಾಳವಾಗಿಸಿದೆ.
ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ಸ್ಟಾರ್ ಸಿನಿಮಾಗಳಿಗೆ ಒಟಿಟಿಯಲ್ಲಿ ಭರ್ಜರಿ ಬೇಡಿಕೆ ಬರುತ್ತಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು 100 ಕೋಟಿ ರೂ.ಗೆ ಕೊಳ್ಳಲು ಒಟಿಟಿ ಆಫರ್ ಬಂದಿತ್ತು ಎಂಬುದು ಸುದ್ದಿಯಾಗಿತ್ತು.
ಇದೀಗ ತಮಿಳು ನಟ ಅಜಿತ್ ನಾಯಕರಾಗಿರುವ ವಲಿಮೈ ಸಿನಿಮಾಗೂ ಅಂತಹದ್ದೇ ಭರ್ಜರಿ ಆಫರ್ ಬಂದಿದೆ ಎಂಬ ಸುದ್ದಿಯಿದೆ. 300 ಕೋಟಿ ರೂ. ಕೊಟ್ಟು ವಲಿಮೈ ಸಿನಿಮಾ ಕೊಳ್ಳಲು ಒಟಿಟಿ ಫ್ಲ್ಯಾಟ್ ಫಾರಂ ಒಂದು ಮುಂದೆ ಬಂದಿದೆಯಂತೆ. ಆದರೆ ಅದನ್ನು ತಿರಸ್ಕರಿಸಿರುವ ಚಿತ್ರತಂಡ ಏನೇ ಆಗಲಿ, ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಾಗಿ ತೀರ್ಮಾನಿಸಿದೆ.
ಕೆಲವು ಸಣ್ಣ ಬಜೆಟ್ ನ ನಿರ್ಮಾಪಕರು ನಷ್ಟ ಮಾಡಿಕೊಳ್ಳುವುದಕ್ಕಿಂತ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಸ್ಟಾರ್ ನಟರ ಸಿನಿಮಾಗಳು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲು ಆರಂಭವಾದರೆ ಥಿಯೇಟರ್ ಮಾಲಿಕರು ಸಂಕಷ್ಟಕ್ಕೀಡಾಗಬೇಕಾಗುತ್ತದೆ.