ಜೈಲಿನಿಂದ ನಗು ನಗುತ್ತಲೇ ಹೊರಬಂದು ಪುಣ್ಯ ಸ್ನಾನ ಮಾಡಿದ ಪವಿತ್ರಾ ಗೌಡ

Krishnaveni K

ಮಂಗಳವಾರ, 17 ಡಿಸೆಂಬರ್ 2024 (10:45 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಪಡೆದಿರುವ ಪವಿತ್ರಾ ಗೌಡ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದು, ಕೂಡಲೇ ದೇವಾಲಯಕ್ಕೆ ತೆರಳಿ ಪವಿತ್ರಸ್ನಾನ ಮಾಡಿದ್ದಾರೆ.

ನಿನ್ನೆ ಸಂಜೆಯೇ ಜಾಮೀನು ಪ್ರಕ್ರಿಯೆ ಮುಗಿದಿತ್ತು. ಹೀಗಾಗಿ ಇಂದು ಬೆಳಿಗ್ಗೆಯೇ ಪವಿತ್ರಾ ಜೈಲಿನಿಂದ ರಿಲೀಸ್ ಆಗಿದ್ದಾರೆ. ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ನಗು ನಗುತ್ತಲೇ ಸ್ಟೈಲ್ ಆಗಿ ಹೊರಬಂದ ಪವಿತ್ರಾ ಗೌಡ ಬಳಿಕ ತಮ್ಮ ತಾಯಿ ಜೊತೆ ತಲಘಟ್ಟಪುರದ ವಜ್ರ ಮುನೇಶ್ವರ ದೇವಾಲಯಿಕ್ಕೆ ಭೇಟಿ ನೀಡುತ್ತಾರೆ.

ತಲಘಟ್ಟಪುರದ ವಜ್ರ ಮುನೇಶ್ವರ ದೇವಾಲಯದಲ್ಲಿ ಮೊದಲೇ ಪೂಜೆಗೆ ಅಣಿ ಮಾಡಲಾಗಿತ್ತು. ಮಗಳನ್ನು ಹೊರತರಲು ತಾಯಿ ಮಾಡಿದ್ದ ಹರಕೆಯಂತೆ ದೇವಾಲಯದಲ್ಲಿ ಮೊದಲು ಪುಷ್ಕರಣಿ ನೀರಿನಿಂದ ಅರ್ಚಕರು ಪವಿತ್ರ ಜಲ ಸುರಿದಿದ್ದಾರೆ.

ಸ್ನಾನದ ಬಳಿಕ ಮಡಿಯಲ್ಲಿ ದೇವರ ಪೂಜೆ ಸಲ್ಲಿಸಿದ್ದಾರೆ. ಚಳಿಯಲ್ಲಿ ಒದ್ದೆಬಟ್ಟೆಯಲ್ಲೇ ಅಗರಬತ್ತಿ ಹಿಡಿದುಕೊಂಡು ದೇವಾಲಯಕ್ಕೆ ಸುತ್ತಿ ಪೂಜೆ ಮಾಡಿದ್ದಾರೆ. ಇದಾದ ಬಳಿಕ ಪವಿತ್ರಾ ಗೌಡ ತಮ್ಮ ತಾಯಿ ಮನೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ