ಪವಿತ್ರಾ ಗೌಡಗೆ ಇಂದು ಕೊನೆಗೂ ಬಿಡುಗಡೆ ಭಾಗ್ಯ

Krishnaveni K

ಮಂಗಳವಾರ, 17 ಡಿಸೆಂಬರ್ 2024 (09:56 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಪಡೆದಿರುವ ಎ1 ಆರೋಪಿ ಪವಿತ್ರಾ ಗೌಡ ಕೊನೆಗೂ ಇಂದು ಜಾಮೀನು ಪಡೆದು ರಿಲೀಸ್ ಆಗಲಿದ್ದಾರೆ.

ಶುಕ್ರವಾರದೇ ಏಳು ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಮಂಜೂರಾಗಿತ್ತು. ಆದರೆ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಇದುವರೆಗೆ ಆರೋಪಿಗಳು ರಿಲೀಸ್ ಆಗಿರಲಿಲ್ಲ. ನಿನ್ನೆ ಐವರು ಆರೋಪಿಗಳಿಗೆ ಶ್ಯೂರಿಟಿ ಸಿಕ್ಕಿದೆ. ಶ್ಯೂರಿಟಿ ಸೇರಿದಂತೆ ಕಾನೂನು ಪ್ರಕ್ರಿಯೆಗಳು ಪುರ್ಣಗೊಳ್ಳಲು ಸಂಜೆಯಾಗಿದ್ದರಿಂದ ನಿನ್ನೆ ರಾತ್ರಿ ಆರೋಪಿಗಳು ಜೈಲಿನಲ್ಲೇ ಕಳೆಯಬೇಕಾಯಿತು.

ಇಂದು ಪವಿತ್ರಾ ಗೌಡ ಸೇರಿದಂತೆ ಐವರು ಆರೋಪಿಗಳು ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರಿಗೆ ತಾಯಿಯ ಸ್ನೇಹಿತೆ ಮತ್ತು ಮನೀಶ್ ಎಂಬವರು ಶ್ಯೂರಿಟಿ ಬಾಂಡ್ ನೀಡಿದ್ದರು.

ಜೂನ್ ನಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳ ಜೊತೆ ಅರೆಸ್ಟ್ ಆಗಿದ್ದ ಪವಿತ್ರಾ ಗೌಡ ಇದೇ ಮೊದಲ ಬಾರಿಗೆ ಜೈಲಿನಿಂದ ಹೊರಬರುತ್ತಿದ್ದಾರೆ. ಮುಂದಿನ ಹಂತದಲ್ಲಿ ವಿಚಾರಣೆ ಸಂದರ್ಭದಲ್ಲಿ ಅವರು ಕೋರ್ಟ್ ಗೆ ಹಾಜರಾಗಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ