ದರ್ಶನ್ ಆಂಡ್ ಗ್ಯಾಂಗ್ ಗೆ ಶ್ಯೂರಿಟಿ ಕೊಟ್ಟವರು ಯಾರು

Krishnaveni K

ಸೋಮವಾರ, 16 ಡಿಸೆಂಬರ್ 2024 (15:46 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ರೆಗ್ಯುಲರ್ ಜಾಮೀನಿನ ಪ್ರಕ್ರಿಯೆಗಾಗಿ ಕೋರ್ಟ್ ಗೆ ಬಂದಿದ್ದಾರೆ. ಉಳಿದ ಆರೋಪಿಗಳ ಜಾಮೀನು ಪ್ರಕ್ರಿಯೆಯೂ ನಡೆಯುತ್ತಿದೆ.

ದರ್ಶನ್ ಗೆ ಈ ಹಿಂದೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವಾಗ ಧನ್ವೀರ್ ಗೌಡ ಮತ್ತು ದಿನಕರ್ ತೂಗುದೀಪ ಶ್ಯೂರಿಟಿ ನೀಡಿದ್ದರು. ಈಗಲೂ ಅವರೇ ದರ್ಶನ್ ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಿದ್ದಾರೆ. ಇದಕ್ಕಾಗಿಯೇ ಇಂದು ದರ್ಶನ್ ಆಸ್ಪತ್ರೆಯಿಂದ ಕೋರ್ಟ್ ಗೆ ಬಂದಿದ್ದಾರೆ. ಇದಾದ ಬಳಿಕ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ದರ್ಶನ್ ಹೊರತುಪಡಿಸಿ ಎ1 ಪವಿತ್ರಾ ಗೌಡ, ಪ್ರದೋಶ್, ಅನುಕುಮಾರ್, ಜಗದೀಶ್, ಲಕ್ಷ್ಮಣ್, ನಾಗರಾಜು ಅವರಿಗೂ ಜಾಮೀನು ಸಿಕ್ಕಿತ್ತು. ಇದೀಗ ಪವಿತ್ರಾ ಗೌಡಗೆ ಅವರ ಸ್ನೇಹಿತೆ ಹಾಗೂ ಮನೀಶ್ ಎಂಬವರು ಶ್ಯೂರಿಟಿ ನೀಡಿದ್ದಾರೆ. ಪ್ರದೋಷ್ ಗೆ ಆತನ ಪತ್ನಿಯೇ ಶ್ಯೂರಿಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶ್ಯೂರಿಟಿ ಬಾಂಡ್ ಪ್ರತಿ ಕೋರ್ಟ್ ಗೆ ತಲುಪಿದ ನಂತರ ಎಲ್ಲರೂ ಬಿಡುಗಡೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ