ಆಸ್ಪತ್ರೆಯಿಂದ ನೇರವಾಗಿ ಕೋರ್ಟ್ ಗೆ ಹಾಜರಾದ ದರ್ಶನ್

Krishnaveni K

ಸೋಮವಾರ, 16 ಡಿಸೆಂಬರ್ 2024 (15:05 IST)
ಬೆಂಗಳೂರು: ಬೆನ್ನು ನೋವಿನ ಕಾರಣಕ್ಕೆ ಬಿಜಿಎಸ್ ಆಸ್ಪತ್ರೆಯಲ್ಲಿರುವ ನಟ ದರ್ಶನ್ ಇಂದು ನೇರವಾಗಿ ಕೋರ್ಟ್ ಗೆ ಹಾಜರಾಗಿದ್ದಾರೆ. ಹೀಗಾಗಿ ಅವರು ಆಸ್ಪತ್ರೆಗೆ ಮತ್ತೆ ಮರಳುತ್ತಾರಾ ಎನ್ನುವುದು ಖಚಿತವಾಗಿಲ್ಲ.

ಆಸ್ಪತ್ರೆಯಿಂದ ಹೊಸಕೆರೆಹಳ್ಳಿಯ ಪತ್ನಿ ವಿಜಯಲಕ್ಷ್ಮಿ ಮನೆಗೆ ತೆರಳಿದ್ದ ದರ್ಶನ್ ಬಳಿಕ ಕೋರ್ಟ್ ಗೆ ತೆರಳುತ್ತಿದ್ದಾರೆ. ದರ್ಶನ್ ಗೆ ಮೊನ್ನೆಯಷ್ಟೇ ರೆಗ್ಯುಲರ್ ಜಾಮೀನು ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಅವರು ಬೇಲ್ ಬಾಂಡ್ ಗೆ ಸಹಿ ಹಾಕಲು ತೆರಳಲಿದ್ದಾರೆ ಎನ್ನಲಾಗಿದೆ.

ಇಂದು ಬಿಜಿಎಸ್ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಪ್ರಕ್ರಿಯೆ ಏನೂ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಕೋರ್ಟ್ ಗೆ ತೆರಳಿ ಮತ್ತೆ ಆಸ್ಪತ್ರೆಗೆ ಬರುತ್ತಾರಾ ಅಥವಾ ಮನೆಗೆ ತೆರಳುತ್ತಾರಾ ಎನ್ನುವುದು ಖಚಿತವಾಗಿಲ್ಲ.

ಆದರೆ ಮೊನ್ನೆಯಷ್ಟೇ ಶಸ್ತ್ರಚಿಕಿತ್ಸೆಯೇ ಗತಿ ಎನ್ನಲಾಗಿತ್ತು. ಆದರೆ ಇಂದು ಅವರು ಆರಾಮವಾಗಿಯೇ ನಡೆದುಕೊಂಡು ಕಾರಿನತ್ತ ತೆರಳಿದ್ದಾರೆ. ಅಲ್ಲದೆ ಕಾನೂನು ಪ್ರಕ್ರಿಯೆಗೆ ಖುದ್ದಾಗಿ ಹಾಜರಾಗುತ್ತಿದ್ದಾರೆ.

ಇದೀಗ ಮಧ್ಯಂತರ ಜಾಮೀನು ವಿಚಾರದಲ್ಲಿ ಶಸ್ತ್ರಚಿಕಿತ್ಸೆ ನೆಪ ಹೇಳಿದ್ದ ದರ್ಶನ್ ಈಗ ಸರ್ಜರಿ ಮಾಡಿಸದೇ ಇರುವುದರಿಂದ ಮುಂದೆ ಇದನ್ನು ಪೊಲೀಸರು ಪ್ರಶ್ನೆ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ