ದರ್ಶನ್ ತಮ್ಮ ಪತ್ನಿ ಜೊತೆ ದುಬೈಗೆ ಹೋಗಿದ್ದಕ್ಕೆ ಪವಿತ್ರಾ ಮುನಿಸಿಕೊಂಡಿದ್ದಳಂತೆ. ಈ ಬಗ್ಗೆ ಸಮತಾ ಹೇಳಿಕೆ ನೀಡಿದ್ದಾರೆ. ಪವಿತ್ರಾ ಮತ್ತು ದರ್ಶನ್ ನಡುವೆ ಏನೇ ಮನಸ್ತಾಪವಾದರೂ ನನಗೆ ಗೊತ್ತಾಗುತ್ತಿತ್ತು. ಪವಿತ್ರಾ ಎಲ್ಲವನ್ನೂ ನನ್ನ ಬಳಿ ಹಂಚಿಕೊಳ್ಳುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ಆಗ ಪವಿತ್ರಾ ಸಿಟ್ಟಾಗಿದ್ದರು. ಈ ವಿಚಾರವಾಗಿ ದರ್ಶನ್ ಜೊತೆ ಕಿರಿಕ್ ಆಗಿತ್ತು. ಇಬ್ಬರೂ ಕೆಲವು ಸಮಯ ಮಾತನಾಡಿರಲಿಲ್ಲ. ರೇಣುಕಾಸ್ವಾಮಿ ಕಿಡ್ನ್ಯಾಪ್ ಆದ ಬಳಿಕವೇ ಇಬ್ಬರೂ ಮಾತನಾಡಿದ್ದು ಎಂದು ಸಮತಾ ಹೇಳಿದ್ದಾಳೆ.
ಅಷ್ಟೇ ಅಲ್ಲ, ಶೆಡ್ ಗೆ ಹೋಗದಂತೆ ಪವಿತ್ರಾಗೆ ಕಾಲ್ ಮಾಡುವಾಗ ಬುದ್ಧಿವಾದ ಹೇಳಿದ್ದೆ. ಆದರೆ ಅಷ್ಟರಲ್ಲಿ ದರ್ಶನ್ ಬಂದರು ಎಂದು ಪವಿತ್ರಾ ಕರೆ ಕಟ್ ಮಾಡಿದ್ದರು. ಶೆಡ್ ಗೆ ಹೋಗಿ ಬಂದ ಮೇಲೆ ಕಾಲ್ ಮಾಡಿದ್ದಳು. ಆಗ ರೇಣುಕಾಸ್ವಾಮಿ ಕೈಯಲ್ಲಿ ಕ್ಷಮೆ ಕೇಳಿಸಿದ್ದಾಗಿ ಹೇಳಿದ್ದಳು ಎಂದು ಚಾರ್ಜ್ ಶೀಟ್ ನಲ್ಲಿ ಸಮತಾ ಹೇಳಿಕೆ ನೀಡಿದ್ದಾಳೆ.