ಧ್ರುವ ಸರ್ಜಾ ‘ಪೊಗರು’ ಸಿನಿಮಾಗೆ ಹಿಂದಿಯಲ್ಲಿ ಭಾರೀ ಡಿಮ್ಯಾಂಡ್

ಶುಕ್ರವಾರ, 27 ನವೆಂಬರ್ 2020 (09:10 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾ ಈಗಾಗಲೇ ಟ್ರೈಲರ್, ಹಾಡುಗಳಿಂದ ದಾಖಲೆಯ ವೀಕ್ಷಣೆ ಪಡೆದು ಬಿಡುಗಡೆಗೆ ಕಾದು ನಿಂತಿದೆ.


ಈ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಈಗ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಎಂಬ ಸುದ್ದಿಯಿದೆ. ಮೂಲಗಳ ಪ್ರಕಾರ 7.2 ಕೋಟಿ ರೂ.ಗೆ ಪೊಗರು ಡಬ್ಬಿಂಗ್ ಹಕ್ಕು ಹಿಂದಿಗೆ ಮಾರಾಟವಾಗಿದೆ. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಡಿಸೆಂಬರ್ 25 ಕ್ರಿಸ್ ಮಸ್ ಗೆ ಅಥವಾ ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಈಗ ಹಿಂದಿಯಲ್ಲೂ ಧ್ರುವ ಸರ್ಜಾ ಕ್ಲಿಕ್ ಆದರೆ ಅವರ ಇಮೇಜ್ ಹೆಚ್ಚಾಗುವುದಂತೂ ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ