ಅಂಜೂರ ಹಣ್ಣನ್ನು ಊಟಕ್ಕೂ ಮೊದಲು ತಿಂದರೆ ಏನಾಗುತ್ತದೆ ಗೊತ್ತಾ?
ಗುರುವಾರ, 7 ಜೂನ್ 2018 (14:16 IST)
ಬೆಂಗಳೂರು : ಅಂಜೂರ… ಈ ಹಣ್ಣಿನ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಇದನ್ನು ಹತ್ತಿಹಣ್ಣು ಎಂದು ಸಹ ಕರೆಯುತ್ತಾರೆ. ಚೆನ್ನಾಗಿ ಮಾಗಿದ ಈ ಹಣ್ಣನ್ನು ಒಣಗಿಸಿ ಡ್ರೈ ಫ್ರೂಟ್ಸ್ ರೂಪದಲ್ಲಿ ಸಹ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಇದನ್ನ ಯಾವಾಗ ತಿಂದರು ಆರೋಗ್ಯಕ್ಕೆ ಉತ್ತಮ. ಆದರೆ ಇದನ್ನ ಊಟಕ್ಕೆ ಮುನ್ನ ತಿಂದರೆ ಸಾಕಷ್ಟು ಲಾಭಗಳಾಗುತ್ತವೆ. ಯಾವೆಲ್ಲ ಲಾಭಗಳನ್ನ ಇದರಿಂದ ಪಡೆಯ ಬಹುದು ಎಂಬುದು ಇಲ್ಲಿದೆ ನೋಡಿ.
* ರಕ್ತಹೀನತೆ ಸಮಸ್ಯೆ ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಆದರೆ ಅಂತಹವರು ನಿತ್ಯ ಎರಡು ಅಂಜೂರವನ್ನು ಊಟಕ್ಕೂ ಮುನ್ನ ತಿಂದರೆ ಅವರಲ್ಲಿ ರಕ್ತ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಮಲೇರಿಯಾ, ಟೈಫಾಯಿಡ್, ಡೆಂಗ್ಯೂನಂತಹ ವಿಷಮ ಜ್ವರದಿಂದ ಬಳಲುತ್ತಿರುವವರಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾದವರಿಗೆ ತಿನ್ನಿಸಿದರೆ ಕೂಡಲೆ ಪ್ಲೇಟ್‌ಲೆಟ್‍ಗಳು ಹೆಚ್ಚುತ್ತವೆ.
* ಅಧಿಕ ತೂಕದ ಸಮಸ್ಯೆ ಸಹ ಈಗ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜೂರ ಹಣ್ಣನ್ನು ಎರಡು ಹೊತ್ತು ಊಟಕ್ಕೂ ಮುನ್ನ ತಿಂದರೆ ಅದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದರಿಂದ ಹೆಚ್ಚಾಗಿ ತಿನ್ನುವುದು ತಪ್ಪುತ್ತದೆ. ಪ್ರತಿಫಲವಾಗಿ ತೂಕ ಕಡಿಮೆಯಾಗುತ್ತಾರೆ. ಅಷ್ಟೇ ಅಲ್ಲ ಅಂಜೂರದಲ್ಲಿ ಇರುವ ಪೋಷಕಗಳು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲನ್ನು ಸಹ ಕಡಿಮೆ ಮಾಡುತ್ತವೆ.
* ಅಂಜೂರ ಹಣ್ಣು ಮಧುಮೇಹ ಇರುವವರಿಗೆ ಅದೆಷ್ಟೋ ಒಳಿತು ಮಾಡುತ್ತದೆ. ಊಟಕ್ಕೆ ಮುನ್ನ ಇವನ್ನು ತಿಂದರೆ ಆ ಬಳಿಕ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಷ್ಟಾಗಿ ಹೆಚ್ಚಾಗಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ